Friday, March 29, 2024
spot_imgspot_img
spot_imgspot_img

ಅಪರೂಪದ ಹೆಬ್ಬಾವು

- Advertisement -G L Acharya panikkar
- Advertisement -

ಬಂಟ್ವಾಳ: ಅಪರೂಪದ ಹೆಬ್ಬಾವು ಒಂದನ್ನು ರಕ್ಷಣೆ ಮಾಡಿದ ತಂಡ ಸುರಕ್ಷಿತ ಸ್ಥಳಕ್ಕೆ ನೀಡಿದ ಘಟನೆ ಇಂದು ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿ ನಡೆದಿದೆ. ಅಪರೂಪದ ಬಿಳಿ ಬಣ್ಣದ  ” ಆಲ್ಬಿನೊ ” ಹೆಬ್ಬಾವು ಒಂದು ಕಾವಳಕಟ್ಟೆಯ ಮನೆಯೊಂದಕ್ಕೆ  ಅತಿಥಿಯಾಗಿ ಬಂದಿದ್ದು ಅದನ್ನು ಹಿಡಿದು ಸುರಕ್ಷಿತವಾಗಿ ಮಂಗಳೂರು ಪಿಲಿಕುಳ ನಿಸರ್ಗಧಾಮ ಕ್ಕೆ ನೀಡಲಾಗಿದೆ.ಬಂಟ್ವಾಳ ತಾಲೂಕಿನ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಗೆ ಹೆಬ್ಬಾವು ಒಂದು ಇಂದು ಆಗಮಿಸಿತ್ತು. ಈ ಹೆಬ್ಬಾವು ಇತರ ಹೆಬ್ಬಾವು ತರ ಇಲ್ಲದೆ ಬಿಳಿ ಬಣ್ಣದಲ್ಲಿತ್ತು. ಹಾಗಾಗಿ ಇವರಿಗೆ ಗೊಂದಲ ಉಂಟಾಗಿತ್ತು. ನೌಶಾದ್ ಅವರು ಸ್ನೇಹಿತ ಎಂ.ಕೆ.ಆಶೀಪ್ ಅವರಿಗೆ ಪೋನ್ ಮಾಡಿ ಈ ವಿಷಯ ತಿಳಿಸಿದರು.ಅವರು ಉರಗತಜ್ಞ  ಸ್ನೇಕ್ ಕಿರಣ್ ಅವರಿಗೆ ಹಾವಿನ ಬಗ್ಗೆ ತಿಳಿಸಿದಾಗ ಅವರು ಕೂಡಲೇ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಇಲಾಖೆಯ ಗಮನಕ್ಕೆ ತಂದು ಅರಣ್ಯ ವಲಯ ಅಧಿಕಾರಿ ಶ್ರೀದರ್ ಅವರ ಅದೇಶದಂತೆ ಪಿಲಿಕುಳಕ್ಕೆ  ನೀಡಿದ್ದಾರೆ.ಸ್ನೇಕ್ ಕಿರಣ್ ಅವರಿಗೆ ಛಾಯಾಗ್ರಾಹಕ ನಿತ್ಯಪ್ರಕಾಶ್ ಬಂಟ್ವಾಳ, ವಿಡಿಯೋ ಗ್ರಾಫರ್ ಪ್ರಸಾದ್ ಅವರು ಸಹಕಾರ ನೀಡಿದ್ದಾರೆ.  ಈ ಅಪರೂಪದ ಹಾವಿನ ಬಗ್ಗೆ ಸ್ನೇಹಿತ ಸ್ನೇಕ್ ಕಿರಣ್ ಹೇಳುವ ಪ್ರಕಾರ ಇಂತಹ ಬಿಳಿ ಬಣ್ಣದ ಉರಗಗಳು ಬಲು ಅಪರೂಪವಾಗಿ ಕಾಣಸಿಗುತ್ತವೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಲ್ಲಿ ಇದು ಎರಡನೇ ಹಾವು ನಮಗೆ ಸಿಕ್ಕಿರುವುದು.  ಹೆಚ್ಚು ಕಡಿಮೆ 20 ಸಾವಿರ ಉರಗಗಳ ಜನನದಲ್ಲಿ ಒಂದು ಮಾತ್ರ ಇಂತಹ ಬಿಳಿ ಬಣ್ಣದ  ಹಾವು ಜನನವಾಗುತ್ತದೆ. ಈ ಜೀವಗಳು ಹುಟ್ಟು ವಾಗ ಚರ್ಮದ ವರ್ಣದ್ರವ್ಯದ (pigment ) ಕೊರತೆ ಯಿಂದ ಹುಟ್ಟುತ್ತವೆ. ಅದರಿಂದ ಇಂತಹ ಜೀವಿಗಳಿಗೆ ” ಆಲ್ಬಿನೊ” (albino) ಎನ್ನುತ್ತಾರೆ.ಇಂತಹ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ, ಯಾಕೆಂದರೆ ಉಳಿದ ಹಾವುಗಳು ಇದರ ಬಣ್ಣದ ಮೇಲೆ ಆಕರ್ಷಣೆ ಗೊಳಗಾಗಿ ಇದನ್ನು ತಿಂದು ಬಿಡುತ್ತವೆ . ಆದರೆ ಈ ಹಾವು ಮಾತ್ರ ಇಷ್ಟು ದೊಡ್ಡದಾಗಿ ಬೆಳೆದಿರುವುದು ವಿಶೇಷ.

- Advertisement -

Related news

error: Content is protected !!