Thursday, March 28, 2024
spot_imgspot_img
spot_imgspot_img

ಅರಿಯಡ್ಕ: ನೌಲ ಸಮುದಾದ ಕುಟುಂಬದಲ್ಲಿ ಎರಡನೇ ವರ್ಷದ ‘ಆಟಿಡ್ ಒಂಜಿದಿನ’ ಕ್ರೀಡಾಕೂಟ

- Advertisement -G L Acharya panikkar
- Advertisement -

ಅರಿಯಡ್ಕ: ಮರಾಠಿ ವಂಶಕ್ಕೆ ಸೇರಿದ ನೌಲ ಸಮುದಾದ ಕುಟುಂಬದಲ್ಲಿ ಎರಡನೇ ವರ್ಷದ ಆಟಿಡ್ ಒಂಜಿದಿನ ಕ್ರೀಡಾಕೂಟ – 2021 ಇಂದು ಜರಗಿತು.

ಅರಿಯಡ್ಕ ಗ್ರಾಮದಲ್ಲಿ ಬಪ್ಪಪುಂಡೇಲು ಕುಟುಂಬ ಬಹಳ ದೊಡ್ಡ ಕುಟುಂಬ. ಇಲ್ಲಿ ನೌಲ ಸಮುದಾಯದವರು ಕಳೆದ ವರ್ಷದಂತೆ ಈ ವರ್ಷವು ಆಟಿಡ್ ಒಂಜಿ ದಿನ ಕ್ರೀಡಾಕೂಟವನ್ನು ಇಂದು ಅಣ್ಣು ಅವರ ಗದ್ದೆಯಲ್ಲಿ ನೆರವೇರಿಸಿದರು.

ಕ್ರೀಡಾಕೂಟದಲ್ಲಿ ಕೇವಲ ಕುಟುಂಬದವರು ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ. ಈ ಕ್ರೀಡಾಕೂಟದಲ್ಲಿ ಮಕ್ಕಳಿಗೆ, ಹಿರಿಯರಿಗೆ ಮತ್ತು ಯುವಕ ಯುವತಿಯರಿಗೆ ವಿಭಿನ್ನ ರೀತಿಯ ಆಟಕೂಟ ವನ್ನು ಏರ್ಪಡಿಸಲಾಗಿತ್ತು ಕ್ರೀಡಾಕೂಟವು ತುಳುನಾಡಿನ ಹಿಂದೂ ಸಂಸ್ಕೃತಿಯಂತೆ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಆಟಗಳಾದ ಓಟ , ಹಗ್ಗಜಗ್ಗಾಟ, ವಾಲಿಬಾಲ್ ಪಂದ್ಯ ಮತ್ತು ವಿಭಿನ್ನ ರೀತಿ ಆಟಗಳು ನಡೆದವು ,ವಿಜೇತರಾದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

ಈ ಕುಟುಂಬವು ಮಾದರಿಯಾಗಿ ಇಡೀ ಗ್ರಾಮದಲ್ಲಿ ತನ್ನ ಬಾಂಧವ್ಯಗಾಗಿ ಮಾದರಿ ಕುಟುಂಬವಾಗಿ ಮನೆಮಾತಾಗಿದೆ. ಪ್ರತಿ ವರ್ಷ ಕುಟುಂಬದ ಸದಸ್ಯರನ್ನು ಒಂದೇ ಕಡೆ ಸೇರಿಸಿ ಮನರಂಜಿಸುವ ಉತ್ತಮ ತುಳುನಾಡಿನ ಸಂಸ್ಕೃತಿ ಕೊಂಡಿಯಂತೆ ಬೆಳೆದಿದೆ.

ಕುಟುಂಬದ ಸದಸ್ಯರು ತನು ಮನ ಧನಗಳಿಂದ ಸಹಕರಿಸಿಕೊಂಡು ಉತ್ತಮ ರೀತಿಯಲ್ಲಿ ಬಾಳಲು ಇದು ಒಂದು ಉತ್ತಮ ಉದಾಹರಣೆಯಾಗಿ ಗ್ರಾಮದಲ್ಲಿ ಮನೆಮಾತಾಗಿದೆ. ಭತ್ತದ ಗಿಡ ನೇಡುವ ಮೂಲಕ ರಾಷ್ಟ್ರಗೀತೆಯೊಂದಿಗೆ 2021ರ ಆಟಿಡ್ ಒಂಜಿ ದಿನ ಕಾರ್ಯಕ್ರಮವು ಕೊನೆಕೊಂಡಿತು.

ಈ ರೀತಿಯ ಉತ್ತಮ ಉದ್ದೇಶದ ವಿಷಯವನ್ನು ಮಾಧ್ಯಮದ ಮೂಲಕ ಕುಟುಂಬದ ಸದಸ್ಯರಾದ ರಾಜೇಶ್ ಪ್ರಸಾದ್ ಹಂಚಿಕೊಂಡಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಇದ್ದ ಈ ರೀತಿಯ ಆಟಗಳು ಎಲ್ಲಾ ಕುಟುಂಬದಲ್ಲಿ ಬರಲಿ ಎಂದು ಹೇಳಿದ್ದಾರೆ.

- Advertisement -

Related news

error: Content is protected !!