Friday, March 29, 2024
spot_imgspot_img
spot_imgspot_img

ಉಗುರುಗಳು ಅರ್ಧಕ್ಕೆ ತುಂಡಾಗುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಅನುಸರಿಸಿ

- Advertisement -G L Acharya panikkar
- Advertisement -

ಕೆಲವು ಮಹಿಳೆಯರು ತಮ್ಮ ಉಗುರುಗಳಿಗೆ ವಿಶೇಷ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಉಗುರುಗಳಿಗೆ ಕೇವಲ ಮೇಲೆ ಬಣ್ಣ ಹಚ್ಚಿಕೊಂಡು ಮಿಂಚಿದರೆ ಸಾಲದು. ಉಗುರುಗಳು ಹಾಗೂ ಬೆರಳುಗಳ ಮಧ್ಯೆ ಇರುವ ಸಂದುಗಳಲ್ಲಿ ಕಂಡು ಬರುವ ಕೊಳೆ ಮತ್ತು ಧೂಳಿನ ಅಂಶವನ್ನು ಪರಿಣಾಮಕಾರಿಯಾಗಿ ತೆಗೆದು ಹಾಕಿ ನಮ್ಮ ಆರೋಗ್ಯ ರಕ್ಷಣೆ ಕೂಡ ನಾವು ಮಾಡಿಕೊಳ್ಳಬೇಕು.
ಬಹಳಷ್ಟು ಸೋಂಕುಗಳು ನಮಗೆ ಉಗುರುಗಳ ಸಂಧಿಯಿಂದ ಬರುತ್ತವೆ ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ನಮ್ಮ ಉಗುರುಗಳು ಬುಡದಿಂದ ದುರ್ಬಲವಾಗುವುದು ಹೆಚ್ಚು. ನೈಲ್ ಪಾಲಿಶ್ ಹಚ್ಚುವುದರಿಂದ ಮತ್ತು ನೈಲ್ ಪಾಲಿಷ್ ರಿಮೊವರ್ ಹೆಚ್ಚಾಗಿ ಬಳಕೆ ಮಾಡುವುದರಿಂದ ಉಗುರುಗಳಿಗೆ ಹಾನಿ ಉಂಟಾಗುತ್ತದೆ ಮತ್ತು ಉಗುರುಗಳು ದುರ್ಬಲಗೊಳ್ಳುತ್ತವೆ.
ಹೆಚ್ಚು ನೀರು ಕುಡಿಯುವುದರಿಂದ ಮತ್ತು ಒಳ್ಳೆಯ ಆರೋಗ್ಯ ಪದ್ಧತಿಯನ್ನು ಅನುಸರಿಸುವುದರಿಂದ ನಮ್ಮ ಉಗುರುಗಳ ಸೌಂದರ್ಯವನ್ನು ಮತ್ತು ಸದೃಢತೆಯನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಬಹುದು.

ಇದನ್ನು ಮೀರಿ ಕೆಲವೊಂದು ಈ ಕೆಳಗಿನ ಮನೆ ಮದ್ದುಗಳನ್ನು ಪ್ರಯತ್ನ ಮಾಡುವ ಮೂಲಕ ಉಗುರುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ.

ತೆಂಗಿನ ಎಣ್ಣೆ ಬಳಕೆ

ಪ್ರತಿ ದಿನವೂ ನಿಮ್ಮ ಉಗುರುಗಳನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಿದ್ದರೆ ಉಗುರುಗಳ ಹಿಂಭಾಗದ ಚರ್ಮದ ಭಾಗದಲ್ಲಿ ಕಂಡು ಬರುವ ಒಣಗುವಿಕೆ ಸಮಸ್ಯೆ ಎದುರಾಗುತ್ತದೆ. ಇದರಿಂದ ಉಗುರುಗಳು ಅರ್ಧಕ್ಕೆ ಸೀಳುವುದು ಮತ್ತು ಅರ್ಧಕ್ಕೆ ಮುರಿದು ಬೀಳುವುದು ತಪ್ಪುತ್ತದೆ.
ಕೊಬ್ಬರಿ ಎಣ್ಣೆ ಬಳಕೆಯಿಂದ ಗಟ್ಟಿಯಾದ ಉಗುರುಗಳು ಮೃದುವಾಗುತ್ತದೆ ಮತ್ತು ಬೆರಳುಗಳ ಸೋಂಕುಗಳು ಕೂಡ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
ತೆಂಗಿನ ಎಣ್ಣೆ ವಿಷಯದಲ್ಲಿ ಎರಡು ಮಾತಿಲ್ಲ! ಆದ್ರೆ ಈ ಸಂಗತಿಗಳು ನೆನಪಿರಲಿ.

ನಿಂಬೆ ಹಣ್ಣಿನ ರಸ
ನಿಂಬೆ ಹಣ್ಣಿನ ಜೂಸ್ ಬಳಕೆ ಮಾಡುವುದರಿಂದ ನಿಮ್ಮ ಉಗುರುಗಳು ಸದೃಢ ವಾಗುವುದು ಮಾತ್ರವಲ್ಲದೆ ಇದರಿಂದ ಬೇರೆ ಪ್ರಯೋಜನಗಳು ನಿಮಗೆ ಸಿಗುತ್ತವೆ. ನಿಂಬೆ ಹಣ್ಣಿನ ರಸದಲ್ಲಿ ನಿಮ್ಮ ಉಗುರುಗಳನ್ನು ಸ್ವಲ್ಪ ಹೊತ್ತು ಅದ್ದಿ ತೆಗೆಯುವುದರಿಂದ ಉಗುರುಗಳು ತುಂಬಾ ಹೊಳಪಿನಿಂದ ಕೂಡಿರುತ್ತದೆ. ಜೊತೆಗೆ ಉಗುರುಗಳ ಮೇಲೆ ಕಂಡು ಬರುವ ಹಳದಿ ಬಣ್ಣದ ಕಲೆಯನ್ನು ( ನೈಲ್ ಪಾಲಿಶ್ ನ ವಿಪರೀತ ಬಳಕೆಯಿಂದ ) ಹೋಗಲಾಡಿಸುತ್ತದೆ.

ಆಲಿವ್ ಆಯಿಲ್
ಬಹುತೇಕ ಸಾಕಷ್ಟು ಬಗೆಯ ಸೌಂದರ್ಯ ಸಂಬಂಧಿತ ಪರಿಹಾರಗಳಿಗೆ ಆಲಿವ್ ಆಯಿಲ್ ಬಳಕೆ ಮಾಡುತ್ತಾರೆ. ನಿಂಬೆ ಹಣ್ಣಿನ ರೀತಿ ಆಲಿವ್ ಆಯಿಲ್ ನಿಂದ ನಮಗೆ ಸಾಕಷ್ಟು ಲಾಭಗಳಿವೆ. ನಮ್ಮ ಉಗುರುಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಆಲಿವ್ ಆಯಿಲ್ ಪರಿಹಾರ ಒದಗಿಸುತ್ತದೆ.
ಉಗುರುಗಳು ಸೀಳಿಕೊಂಡಿರುವವರಿಗೆ ಮತ್ತು ಅರ್ಧಕ್ಕೆ ಮುರಿದು ಬೀಳುವ ಸಮಸ್ಯೆ ಇದ್ದವರಿಗೆ ಈ ಟಿಪ್ಸ್ ತುಂಬಾ ಅನುಕೂಲಕರ. ಏನೆಂದರೆ ತಮ್ಮ ಬೆರಳುಗಳನ್ನು ಆಲಿವ್ ಆಯಿಲ್ ನಲ್ಲಿ ಸ್ವಲ್ಪ ಹೊತ್ತು ನೆನೆ ಹಾಕಿ ತೆಗೆಯುವುದರಿಂದ ಉಗುರುಗಳ ಬಣ್ಣ ತುಂಬಾ ಹೊಳಪಿನಿಂದ ಕೂಡಿರುವುದು ಮಾತ್ರವಲ್ಲದೆ ಉಗುರುಗಳ ಮೇಲಿನ ಸಣ್ಣ ಪುಟ್ಟ ಕಲೆಗಳು ದೂರವಾಗುತ್ತವೆ. ಉಗುರುಗಳು ತುಂಬಾ ಸದೃಢವಾಗಿ ಆನಂತರದಲ್ಲಿ ರೂಪುಗೊಳ್ಳುತ್ತವೆ.


ಪೆಟ್ರೋಲಿಯಂ ಜೆಲ್ಲಿ

ಸಾಧಾರಣವಾಗಿ ಇದನ್ನು ನಾವು ವ್ಯಾಸಲಿನ್ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಚಳಿಗಾಲದ ಸಂದರ್ಭದಲ್ಲಿ ನಮ್ಮ ತುಟಿಗಳು ಒಡೆದುಕೊಂಡ ಭಾಗದಲ್ಲಿ ಮತ್ತು ನಮ್ಮ ಉಗುರುಗಳು ಸೀಳು ಬಿಟ್ಟಂತಹ ಸಂದರ್ಭದಲ್ಲಿ ಇದನ್ನು ಹಚ್ಚಬಹುದು.
ಹೊರಗಿನ ತಾಪಮಾನದ ಅತ್ಯಂತ ಕಡಿಮೆ ತೇವಾಂಶದಿಂದ ಈ ರೀತಿ ಆಗುತ್ತದೆ. ಹಾಗಾಗಿ ಪೆಟ್ರೋಲಿಯಂ ಜೆಲ್ಲಿ ನಿಮ್ಮ ಚರ್ಮದ ಭಾಗಕ್ಕೆ ಮತ್ತು ಉಗುರುಗಳಿಗೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣ ಲಕ್ಷಣವನ್ನು ಒದಗಿಸಿ ಉಗುರುಗಳನ್ನು ಮಾಯಿಶ್ಚರೈಸ್ ಮಾಡುತ್ತದೆ.

ವಿಟಮಿನ್ – ಇ ಆಯಿಲ್
ನಮ್ಮ ತಲೆ ಕೂದಲಿನ ಆರೋಗ್ಯಕ್ಕೆ ಮತ್ತು ನಮ್ಮ ಉಗುರುಗಳ ಬಲವರ್ಧನೆಗೆ ವಿಟಮಿನ್ ‘ ಈ ‘ ಅಂಶ ತುಂಬಾ ಅಗತ್ಯವಾಗಿದೆ. ವಿಟಮಿನ್ ‘ ಈ ‘ ಅಂಶದಲ್ಲಿ ನಮ್ಮ ಉಗುರುಗಳನ್ನು ಸದೃಢವಾಗಿ ಕಾಪಾಡುವ ಲಕ್ಷಣಗಳಿವೆ.
ಮಾರುಕಟ್ಟೆಗಳಲ್ಲಿ ಮೆಡಿಕಲ್ ಶಾಪ್ ಗಳಲ್ಲಿ ವಿಟಮಿನ್ ‘ ಈ ‘ ಆಯಿಲ್ ಸುಲಭವಾಗಿ ಸಿಗುತ್ತದೆ. ಇದನ್ನು ನೇರವಾಗಿ ನಿಮ್ಮ ಚರ್ಮದ ಭಾಗಕ್ಕೆ ಮತ್ತು ಉಗುರುಗಳಿಗೆ ಹಚ್ಚಬಹುದು.
ಉಗುರುಗಳು ಯಾವ ಅನಾರೋಗ್ಯ ಸೂಚಿಸುವುದು?

ಗಟ್ಟಿಯಾದ ಉಗುರುಗಳನ್ನು ನಯವಾಗಿಸಲು ಟಿಪ್ಸ್

ಈಗಂತೂ ಬಹುತೇಕ ಮಂದಿ ನೈಲ್ ಪಾಲಿಶ್ ಬಳಕೆ ಮಾಡಿಯೇ ಮಾಡುತ್ತಾರೆ ಮತ್ತು ಹಚ್ಚಿದ ನೈಲ್ ಪಾಲಿಶ್ ತೆಗೆಯಲು ನೈಲ್ ಪಾಲಿಷ್ ರಿಮೊವರ್ ಬಳಕೆ ಮಾಡಲೇಬೇಕು.
ಈ ಎರಡು ಪದಾರ್ಥಗಳಲ್ಲಿ ಕಂಡು ಬರುವ ರಾಸಾಯನಿಕಗಳು ಉಗುರುಗಳಿಗೆ ತುಂಬಾ ಅನಾರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇದರಿಂದಲೇ ಹೆಚ್ಚು ಉಗುರುಗಳು ಬಹಳ ಸುಲಭವಾಗಿ ಮುರಿದು ಬೀಳುತ್ತವೆ ಎಂದು ತಿಳಿದು ಬಂದಿದೆ. ಹಾಗಾಗಿ ಇವುಗಳನ್ನು ಸಾಧ್ಯವಾದಷ್ಟು ನಿಯಂತ್ರಣ ಮಾಡಿ.

ನಿಮ್ಮ ಉಗುರುಗಳು ತುಂಬಾ ಮೃದುವಾಗಿದ್ದರೆ ಮತ್ತು ಬಹಳ ಬೇಗನೆ ಕಟ್ ಆಗುತ್ತಿದ್ದರೆ, ಆಗ ನಿಮ್ಮ ಉಗುರುಗಳಿಗೆ ತೇವಾಂಶ ಹೆಚ್ಚಾಗಿದೆ ಎಂದು ಅರ್ಥ. ಈ ಸಂದರ್ಭದಲ್ಲಿ ನೀವು ನಿಮ್ಮ ಉಗುರುಗಳಿಗೆ ಸಿಗುವಂತಹ ತೇವಾಂಶದ ವಾತಾವರಣವನ್ನು ಮೊದಲು ನಿಯಂತ್ರಣ ಮಾಡಬೇಕು. ಅಂದರೆ ನೀವು ಬಟ್ಟೆ ತೊಳೆಯುವಾಗ ಮತ್ತು ಪಾತ್ರೆ ತೊಳೆಯುವಾಗ ಕೈಗಳಿಗೆ ಗ್ಲೌಸ್ ಹಾಕಿಕೊಂಡು ಕೆಲಸ ಮಾಡುವುದು ಒಳ್ಳೆಯದು.

ಕೃತಕ ಉಗುರುಗಳು ನಿಮ್ಮ ನೈಸರ್ಗಿಕ ಉಗುರುಗಳ ಬೆಳವಣಿಗೆಗೆ ಬಹಳಷ್ಟು ಹಾನಿ ಉಂಟು ಮಾಡುತ್ತವೆ ಎಂದು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಬಳಕೆ ಮಾಡಿರುವ ಜಿಗುಟಾದ ವಸ್ತು ನಿಮ್ಮ ಸ್ವಂತ ಉಗುರುಗಳನ್ನು ಹಾನಿ ಮಾಡುವುದು ಮಾತ್ರವಲ್ಲದೆ ಉಗುರುಗಳ ಸಂದುಗಳಲ್ಲಿ ಸೋಂಕುಗಳನ್ನು ಉಂಟು ಮಾಡುತ್ತದೆ.

ನಿಮ್ಮ ಉಗುರುಗಳಿಗೆ ಆಗಾಗ ಮಾಯಿಸ್ಚರೈಸರ್ ಮಾಡುವುದು ಮರೆಯಬೇಡಿ. ಇದರಿಂದ ಉಗುರುಗಳು ಅರ್ಧಕ್ಕೆ ಸೀಳುವುದು ತಪ್ಪುತ್ತದೆ. ಮಾಯಿಸ್ಚರೈಸರ್ ಮಾಡುವುದರಿಂದ ಉಗುರುಗಳು ಒಣಗುವುದು ಕಡಿಮೆಯಾಗುತ್ತದೆ.

ಈ ಮೇಲಿನ ಎಲ್ಲಾ ಪ್ರಕ್ರಿಯೆಗಳ ಜೊತೆಗೆ ನೀವು ಆರೋಗ್ಯಕರವಾದ ಆಹಾರ ಸೇವನೆಯ ಬಗ್ಗೆ ಹೆಚ್ಚು ಒತ್ತು ಕೊಡಬೇಕು. ಸದಾ ಪೌಷ್ಟಿಕಾಂಶಗಳು ಹೆಚ್ಚಾಗಿರುವ ಅಂದರೆ ವಿಟಮಿನ್ ಅಂಶಗಳು, ಜಿಂಕ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.

ಇದರಿಂದ ನಿಮ್ಮ ದೇಹದ ಆರೋಗ್ಯ ಉತ್ತಮಗೊಳ್ಳುವುದು ಮಾತ್ರವಲ್ಲದೆ ನಿಮ್ಮ ಉಗುರುಗಳು ಬಲಗೊಂಡು ತುಂಬಾ ಆರೋಗ್ಯದಿಂದ ಕೂಡಿರುತ್ತವೆ.

- Advertisement -

Related news

error: Content is protected !!