Friday, March 29, 2024
spot_imgspot_img
spot_imgspot_img

ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆ ಇಲ್ಲಿದೆ ಟಿಪ್ಸ್‌

- Advertisement -G L Acharya panikkar
- Advertisement -

ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಒಂದಲ್ಲ ಒಂದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಹಿಮ್ಮಡಿ ಒಡೆತ, ಚರ್ಮ ಬಿರುಕು ಬಿಡುವುದು, ಒಣ ಚರ್ಮ, ತುಟಿಯ ಚರ್ಮ ಒಣಗಿ ರಕ್ತ ಬರುವುದು ಸೇರಿದಂತೆ ಅನೇಕ ಸಮಸ್ಯೆಗಳು ಕಾಡಲಾರಂಭಿಸುತ್ತವೆ.

ಹೀಗಾಗಿ ಚಳಿಗಾಲದಲ್ಲಿ ಸೌಂದರ್ಯದ ಆರೈಕೆ ಮಾಡಿಕೊಳ್ಳುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಅಂದದ ತುಟಿಗಳನ್ನು ಕಾಪಿಟ್ಟುಕೊಳ್ಳಲು ದಿನನಿತ್ಯ ಆರೈಕೆಯ ಅಗತ್ಯವಿರುತ್ತದೆ. ಹಾಗಾದರೆ ಒಡೆದ ತುಟಿಗಳು ಸರಿಪಡಿಸಿಕೊಳ್ಳಲು ಏನು ಮಾಡಬಹುದು ಎನ್ನುವ ಟಿಪ್ಸ್‌ ಇಲ್ಲಿದೆ ನೋಡಿ.

ಅಲೋವೆರಾ

ತುಟಿಗಳ ಆರೋಗ್ಯ ಕಾಪಾಡಿಕೊಳ್ಳಲು ಅಲೋವೆರಾ ಜೆಲ್‌ ಅತ್ಯುತ್ತಮ ಮನೆಮದ್ದಾಗಿದೆ. ಆದಷ್ಟು ತಾಜಾ ಅಲೋವೆರಾ ಬಳಕೆ ಮಾಡಿದರೆ ಒಳ್ಳೆಯದು.

ತಾಜಾ ಅಲೋವೆರಾವನ್ನು ಒಡೆದ ತುಟಿಗಳ ಮೇಲೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ. ಅಲ್ಲದೆ ತುಟಿ ಒಡೆದಿರುವುದು ಸರಿಯಾಗುತ್ತದೆ.

​ಕೊಬ್ಬರಿ ಎಣ್ಣೆ

ತ್ವಚೆಯ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಕೊಬ್ಬರಿ ಎಣ್ಣೆ ಅತ್ಯುತ್ತಮ ಮೂಲವಾಗಿದೆ. ಇದು ತುಟಿಯ ಚರ್ಮದ ಆರೋಗ್ಯಕ್ಕೂ ಬಹಳ ಒಳ್ಳೆಯದು.

ಹೀಗಾಗಿ ಚಳಿಗಾಲದಲ್ಲಿ ತುಟಿ ಚೆನ್ನಾಗಿರಲು ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆಯನ್ನು ತುಟಿಗೆ ಸವರಿಕೊಂಡು ಮಲಗಿ. ಇದರಿಂದ ಒಣಗುವ ಸಮಸ್ಯೆ ನಿವಾರಣೆಯಾಗುವುದು.

ಸಕ್ಕರೆ

ಒಡೆದ ತುಟಿ, ಒಣ ಚರ್ಮದ ತುಟಿಯ ಸಮಸ್ಯೆಗಳಿಗೆ ಸಕ್ಕರೆ ಉತ್ತಮ ಮದ್ದಾಗಿದೆ. ಸಕ್ಕರೆಯನ್ನು ತುಟಿಗೆ ಹಚ್ಚಿಕೊಂಡು ಒಂದೈದು ನಿಮಿಷ ಹಾಗೆಯೇ ಬಿಡಿ. ನಂತರ ನಿಧಾನವಾಗಿ ಉಜ್ಜಿಕೊಳ್ಳಿ.

ಇದರಿಂದ ತುಟಿಯ ಮೇಲಿನ ಒಣ ಚರ್ಮ ಕಿತ್ತು ಬರುತ್ತದೆ. ನಂತರ ತೊಳೆದುಕೊಂಡು ಕೊಬ್ಬರಿ ಎಣ್ಣೆ ಅಥವಾ ಅಲೋವೆರಾ ಜೆಲ್ಲ ಹಚ್ಚಿ. ಇದರಿಂದ ತುಟಿಗೆ ನೈಸರ್ಗಿಕ ಸ್ಕೃಬ್‌ ಆದಂತಾಗುತ್ತದೆ.

​ಹಾಲಿನ ಕೆನೆ

ಚರ್ಮಕ್ಕೆ ಉತ್ತಮ ಮೃದುತ್ವವನ್ನು ಹಾಲಿನ ಕೆನೆ ನೀಡುತ್ತದೆ. ಹೀಗಾಗಿ ನಿಮ್ಮ ತುಟಿ ಒಡೆಯುವ ಸಮಸ್ಯೆಗೂ ಕೂಡ ಇದು ಪರಿಹಾರವಾಗುತ್ತದೆ.

ರಾತ್ರಿ ಮಲಗುವಾಗ ತುಟಿಗೆ ಹಾಲಿನ ಕೆನೆಯನ್ನು ಹಚ್ಚಿ ಒಂದೆರಡು ಸೆಕೆಂಡ್‌ ಮಸಾಜ್‌ ಮಾಡಿ. ಇದರಿಂದ ಕೆನೆಯಲ್ಲಿ ಎಣ್ಣೆಯ ಅಂಶ ತುಟಿಗೆ ಹೀರಿಕೊಂಡು ಶುಷ್ಕತೆಯನ್ನು ನಿವಾರಿಸುತ್ತದೆ.

​ಹೆಚ್ಚು ನೀರನ್ನು ಕುಡಿಯಿರಿ

ದೇಹದ ನಿರ್ಜಲೀಕರಣದಿಂದಲೂ ಕೂಡ ತುಟಿ ಒಣಗುತ್ತದೆ ಜೊತೆಗೆ ತುಟಿಯ ಚರ್ಮದ ಸಿಪ್ಪೆ ಸುಲಿಯುತ್ತದೆ. ನೀರನ್ನು ಕುಡಿಯುವುದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.

ಆದರೆ ಮುಖ್ಯವಾದ ಸಂಗತಿಯೆಂದರೆ ನೀರು ಕುಡಯಯುವಾಗ ಬಾಟಲಿ ಅಥವಾ ಲೋಟವನ್ನು ಬಾಯಿಗೆ ಕಚ್ಚಿ ಅಂದರೆ ತುಟಿಗೆ ನೀರು ತಾಗುವ ಹಾಗೆ ಮಾಡಿ ಕುಡಿಯಿರಿ. ಇದರಿಂದ ತುಟಿ ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ.

- Advertisement -

Related news

error: Content is protected !!