Saturday, April 20, 2024
spot_imgspot_img
spot_imgspot_img

ಬೆಳ್ಳಗಾದ ಕೂದಲು ಮರಳಿ ಕಪ್ಪಗಾಗಲು ತೆಂಗಿನ ಎಣ್ಣೆಯೊಂದಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

- Advertisement -G L Acharya panikkar
- Advertisement -

ಸಣ್ಣ ವಯಸ್ಸಿನಲ್ಲಿಯೇ ತಲೆಯ ಕೂದಲು ಬೆಳ್ಳಗಾಗುತ್ತದೆ. ಇದು ಸಾರ್ವಜನಿಕ ಸ್ಥಳದಲ್ಲಿ ಮುಜುಗರವನ್ನು ಉಂಟು ಮಾಡುತ್ತದೆ. ದೈನಂದಿನ ಜೀವನದಲ್ಲಿ ಒತ್ತಡಗಳು ಹೆಚ್ಚಾದಾಗ ಅಥವಾ ಆನುವಂಶಿಕ ಕಾರಣಗಳಿಂದ ಈ ಸಮಸ್ಯೆ ಪ್ರಾರಂಭವಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯೂ ಇದರ ಹಿಂದಿನ ಮತ್ತೊಂದು ಕಾರಣವಾಗಿದೆ. ಬೆಳ್ಳಗಿನ ಕೂದಲಿನಿಂದಾಗಿ ಆಗುವ ಮುಜುಗರವನ್ನು ತಪ್ಪಿಸಲು ಬೆಳ್ಳಗಾದ ಕೂದಲನ್ನು ಕಪ್ಪಗಾಗಿಸಲು ಕೆಲವರು ಹೇರ್ ಡೈ ಪ್ರಯತ್ನಿಸುತ್ತಾರೆ. ಆದರೆ ಇದು ಶುಷ್ಕತೆಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಕಪ್ಪು ಕೂದಲು ಪಡೆಯಲು ಏನು ಮಾಡಬಹುದು? ಇಲ್ಲಿದೆ ನೋಡಿ ಪರಿಹಾರ.

ಸಾಮಾನ್ಯವಾಗಿ ತೆಂಗಿನ ಎಣ್ಣೆ ಕೂದಲಿನ ಸಮಸ್ಯೆಗೆ ಪ್ರಮುಖ ಔಷಧಿ ಎಂದು ಪರಿಗಣಿಸಲಾಗಿದೆ. ಇದು ಕೂದಲನ್ನು ಹೊಳೆಯುವಂತೆ ಮಾಡುವುದಲ್ಲದೆ ಕೂದಲು ಉದುರುವಿಕೆಯನ್ನು ಹೋಗಲಾಡಿಸುತ್ತದೆ. ಆದರೆ ಈ ಎಣ್ಣೆಗೆ ನಿಂಬೆ ರಸವನ್ನು ಮಿಶ್ರಣ ಮಾಡಿದರೆ ಕೂದಲನ್ನು ಕಪ್ಪಾಗಿಸಲು ಮತ್ತು ಕೂದಲಿಗೆ ಅತ್ಯುತ್ತಮ ಪೋಷಣೆಯನ್ನು ನೀಡಲು ಸಹಾಯಕವಾಗಲಿದೆ.

ಕೂದಲಿಗೆ ನಿಂಬೆ ಏಕೆ ಪ್ರಯೋಜನಕಾರಿಯಾಗಿದೆ?

ನಿಂಬೆ ಯಾವಾಗಲೂ ಕೂದಲಿನ ಆರೋಗ್ಯವನ್ನು ಸುಧಾರಿಸಲು ಬಳಸಲಾಗುತ್ತದೆ. ಇದರೊಂದಿಗೆ, ತಲೆಹೊಟ್ಟು ಸುಲಭವಾಗಿ ತೆಗೆಯಬಹುದಾಗಿದ್ದು, ಕೂದಲಿನ ಬೆಳವಣಿಗೆಗೂ ತುಂಬಾ ಪ್ರಯೋಜನಕಾರಿಯಾಗಿದೆ. ಸಮಯಕ್ಕಿಂತ ಮುಂಚಿತವಾಗಿ ನಿಮ್ಮ ಕೂದಲು ಬಿಳಿಯಾಗಬಾರದು ಎಂದು ನೀವು ಬಯಸಿದರೆ ಇದಕ್ಕಾಗಿ ನೀವು ಕೂದಲಿಗೆ ನಿಂಬೆ ಹಚ್ಚಬೇಕು. ಇದು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ.

ಬಿಳಿ ಕೂದಲು ಕಪ್ಪಾಗುವುದು ಹೇಗೆ?

ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ, ಆದರೆ ಚಿಕ್ಕವಯಸ್ಸಿನಲ್ಲಿ ಇದು ಆಗುತ್ತಿದ್ದರೆ ನಿಂಬೆ ಮತ್ತು ತೆಂಗಿನ ಎಣ್ಣೆಯ ಸಹಾಯದಿಂದ ಈ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ತೆಂಗಿನೆಣ್ಣೆಯಲ್ಲಿ ನಿಂಬೆ ರಸವನ್ನು ಬೆರೆಸಿ ನೆತ್ತಿಯಿಂದ ಕೂದಲ ತುದಿಯವರೆಗೆ ಹಚ್ಚಿ, ಇದನ್ನು ನಿಯಮಿತವಾಗಿ ಮಾಡಿದರೆ ರಕ್ತದ ಹರಿವು ಹೆಚ್ಚುತ್ತದೆ ಮತ್ತು ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಪ್ರಾರಂಭಿಸುತ್ತದೆ.

- Advertisement -

Related news

error: Content is protected !!