Friday, March 29, 2024
spot_imgspot_img
spot_imgspot_img

ಸೀಳು ಕೂದಲಿನ ಸಮಸ್ಯೆಗೆ ಇಲ್ಲಿದೆ ನೋಡಿ ಆಯುರ್ವೇದ ಟಿಪ್ಸ್‌

- Advertisement -G L Acharya panikkar
- Advertisement -

ಪ್ರೋಟೀನ್‌ ಕೊರತೆಯಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ. ಒಣ ಕೂದಲು, ಕಪ್ಪಾದ ಕೂದಲ ಬದಲಾಗಿ ಕೂದಲಿನ ಬಣ್ಣ ಕೆಂಪಗಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಅಲ್ಲದೇ ಅನೇಕರಲ್ಲಿ ಕೂದಲಿನ ತುದಿಯಲ್ಲಿ ಎರಡು ಸೀಳುಕಂಡುಬರುತ್ತವೆ. ಇದನ್ನು ಸೀಳು ಕೂದಲು ಅಥವಾ ಸ್ಪ್ಲಿಟ್‌ ಹೇರ್‌ ಎನ್ನುತ್ತಾರೆ. ಕೂದಲನ್ನು ಸರಿಯಾಗಿ ಪೋಷಣೆ ಮಾಡದೇ ಇದ್ದರೆ ಈ ರೀತಿ ಸೀಳು ಕೂದಲು ಉಂಟಾಗುತ್ತದೆ.
ಹಾಗಾದರೆ ಈ ಸೀಳು ಕೂದಲಿನ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು, ಕೂದಲಿನ ರಕ್ಷಣೆ ಹೇಗೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಸಲಹೆ.

ಕೂದಲನ್ನು ಟ್ರಿಮ್‌ ಮಾಡುತ್ತಿರಿ

ಸೀಳು ಕೂದಲನ್ನು ನಿವಾರಣೆ ಮಾಡಲು ಕೂದಲನ್ನು ಟ್ರಿಮ್‌ ಮಾಡುವುದು ಅಥವಾ ತುದಿಯನ್ನು ಕತ್ತರಿಸುವುದು ತ್ವರಿತ ಮಾರ್ಗವಾಗಿದೆ. ನಿಯಮಿತ ಮಧ್ಯಂತರದಲ್ಲಿ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಹಳೆಯ ಕೂದಲನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪ್ರತಿ 2-3 ತಿಂಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಕೂದಲು ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತದೆ.

​ನೆಲ್ಲಿಕಾಯಿ ಪುಡಿ

ಸೀಳು ಕೂದಲನ್ನು ತಡೆಗಟ್ಟಲು ನೆಲ್ಲಿಕಾಯಿ ಪುಡಿಯ ಹೇರ್‌ ಪ್ಯಾಕ್‌ ಸಹಾಯ ಮಾಡುತ್ತದೆ. ಕೂದಲಿನ ಆರೈಕೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುವ ಆಮ್ಲಾ ಕೂದಲು ಕಪ್ಪಾಗಿ, ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ.

ಹೀಗೆ ಮಾಡಿ

ನೆಲ್ಲಿಕಾಯಿ ಪುಡಿಗೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸೀಳು ಕೂದಲಿಗೆ ಹಚ್ಚಿಕೊಳ್ಳಿ. ನಂತರ ಅದು ಒಣಗಿದ ಮೇಲೆ ಹೆಚ್ಚು ರಾಸಾಯನಿಕಗಳಿಲ್ಲದ ಶಾಂಪೂವಿನಿಂದ ಸ್ನಾನ ಮಾಡಿ. ಇದರಿಂದ ಕ್ರಮೇಣ ಕೂದಲಿನ ಆರೋಗ್ಯ ಉತ್ತಮವಾಗುತ್ತದೆ. ಜೊತೆಗೆ ಸೀಳು ಕೂದಲು ನಿವಾರಣೆಯಾಗುತ್ತದೆ.

​ಮೊಟ್ಟೆಯ ಬಳಕೆ

ಹೆಚ್ಚಿನ ಪ್ರೋಟೀನ್ ಮತ್ತು ಕೊಬ್ಬಿನಂಶವಿರುವ ಮೊಟ್ಟೆಗಳು ಒಣ ಮತ್ತು ಹಾನಿಗೊಳಗಾದ ಕೂದಲಿಗೆ ಒಳ್ಳೆಯದು. ಕೂದಲಿನ ಉದ್ದ ಮತ್ತು ಪರಿಮಾಣವನ್ನು ಅವಲಂಬಿಸಿ 1-2 ಮೊಟ್ಟೆಗಳೊಂದಿಗೆ ಹೇರ್ ಮಾಸ್ಕ್ ತಯಾರಿಸಿ, ಅದರಲ್ಲಿ ಅರ್ಧ ಟೀಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಮತ್ತು ಮಾಯಿಶ್ಚರೈಸೇಶನ್ ಡೋಸ್‌ ಕೂದಲಿಗೆ ಅನ್ವಯಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ.

​ಅಲೋವೆರಾದ ಬಳಕೆ

ನೈಸರ್ಗಿಕ ಆರ್ಧ್ರಕ ಗುಣಲಕ್ಷಣಗಳನ್ನು ಹೊಂದಿರುವ ಅಲೋವೆರಾ ಕೂದಲಿನ ಆರೋಗ್ಯವನ್ನು ಮತ್ತು ಹೊಳಪನ್ನು ಹೆಚ್ಚಿಸುತ್ತದೆ. ನೈಸರ್ಗಿಕ ಅಲೋವೆರಾ ಜೆಲ್ಲಿ ಅಥವಾ ಜೆಲ್‌ನಿಂದ ಕೂದಲಿನ ಎಳೆಗಳನ್ನು ಮಸಾಜ್ ಮಾಡುವುದರಿಂದ ಕೂದಲು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಸ್ನಾನದ ಮೊದಲು ಈ ಕೂದಲಿಗೆ ಅಲೋವೆರಾವನ್ನು ಹಚ್ಚುವುದರಿಂದ ಸೀಳು ಕೂದಲನ್ನು ನಿವಾರಣೆ ಮಾಡಬಹುದಾಗಿದೆ.

​ತಣ್ಣನೆಯ ನೀರಿನಿಂದ ತಲೆಸ್ನಾನ ಮಾಡಿ

ಕೂದಲಿಗೆ ಯಾವತ್ತೂ ಬಿಸಿ ನೀರನ್ನು ತಾಗಿಸಬಾರದು. ತುಂಬಾ ಬಿಸಿಯಾದ ನೀರಿನಿಂದ ಕೂದಲನ್ನು ವಾಷ್‌ ಮಾಡುವುದರಿಂದ ನೆತ್ತಿಯನ್ನು ಒಣಗಿಸುತ್ತದೆ ಮತ್ತು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ. ಇದು ಒಡೆಯುವಿಕೆಗೂ ಕಾರಣವಾಗುತ್ತದೆ. ಯಾವಾಗಲೂ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

ಇದರಿಂದ ಕೂದಲಿನ ತುದಿ ಎರಡು ಕವಲಾಗುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ.

- Advertisement -

Related news

error: Content is protected !!