- Advertisement -
- Advertisement -
ವಿಟ್ಲ ಹಳೇ ಬಸ್ ನಿಲ್ದಾಣದ ಮುಂಭಾಗದ ಎಂಪೈರ್ ಮಾಲ್’ನಲ್ಲಿರುವ ಸುಮಾರು 37 ಅಂಗಡಿ ವ್ಯಾಪಾರಸ್ಥರ ಬಾಡಿಗೆಯಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಪ್ರಿಲ್ ತಿಂಗಳ ಬಾಡಿಗೆ ಕಡಿತಗೊಳಿಸುವ ಮೂಲಕ ಮಾಲಕರಾದ ಪೀಟರ್ ಲಸ್ರಾದೋ ಮತ್ತು ಪಾಲುದಾರರು ಮಾದರಿಯಾಗಿದ್ದಾರೆ.
ವಿಟ್ಲದ ಬಹುದೊಡ್ಡ ವಾಣಿಜ್ಯ ಸಂಕೀರ್ಣವಾದ ಎಂಪೈರ್ ಮಾಲ್’ನಲ್ಲಿ ಬ್ಯಾಂಕು, ಫೈನಾನ್ಸ್, ಚಿನ್ನದಂಗಡಿ, ಬಟ್ಟೆಯಂಗಡಿ, ಫ್ಯಾನ್ಸಿ, ಫೂಟ್ವೇರ್, ಹೋಟೆಲ್, ಬೇಕರಿ, ಸಲೂನ್, ತರಕಾರಿ ಅಂಗಡಿ, ಬುಕ್ ಸ್ಟಾಲ್, ಝೆರಾಕ್ಸ್, ಔಷಧಾಲಯ, ಐಸ್ಕ್ರೀಂ ಪಾರ್ಲರ್, ಮೊಬೈಲ್ ಶಾಪ್, ಕಛೇರಿಗಳು ಮೊದಲಾದವು ಕಾರ್ಯಾಚರಿಸುತ್ತಿದೆ. ವಿಟ್ಲ ಎಂಪೈರ್ ಮಾಲ್’ನ ಮಾಲಕರ ಮಾನವೀಯತೆಯನ್ನು ವಿಟ್ಲದ ಜನತೆ ಶ್ಲಾಘಿಸಿದ್ದಾರೆ.
- Advertisement -