ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಟ್ಟು 10 ಜೀವಗಳು ಬಲಿಯಾಗಿದೆ.ಅದರಲ್ಲಿ ಮೊದಲ ಮುಸ್ಲಿಂ ವ್ಯಕ್ತಿಯ ಮರಣ ಇಂದು ಸಂಭವಿಸಿದೆ.
ದಫನ ಕಾರ್ಯದ ಅಂತಿಮ ವಿಧಿ ವಿಧಾನಗಳನ್ನು “ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ” ಮಂಗಳೂರಿನ ವಿಭಾಗೀಯ ಅಧ್ಯಕ್ಷ ಮುಝೈರ್ ಕುದ್ರೋಳಿ ನೇತೃತ್ವದ ತಂಡ ನೆರವೇರಿಸಿದೆ ಎಂದು ಪಿಎಫ್ಐ ಮುಖಂಡ ಅಥಾವುಲ್ಲ ಜೋಕಟ್ಟೆ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ಬಲಿಯಾದ ಜೀವದ ಅಂತಿಮ ವಿಧಿವಿಧಾನಗಳನ್ನು ಯಾವ ರೀತಿ ನೆರವೇರಿಸಬೇಕೆಂದು ಮತ್ತು ವೈದ್ಯಕೀಯ ರಿವಾಜುಗಳನ್ನು ಹೇಗೆ ಪೂರೈಸಬೇಕೆಂಬ ಶಿಬಿರವನ್ನು ಜಿಲ್ಲಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಪಾಪುಲರ್ ಫ್ರಂಟ್ ಇತ್ತೀಚೆಗೆ ಹಮ್ಮಿಕೊಂಡಿರುವುದರಿಂದ ಇಂದಿನ ಮರಣದ ಅಂತಿಮ ಕ್ರಮಗಳು ಯಾವುದೇ ಗೌಜಿಗದ್ದವವಿಲ್ಲದೆ ಅಚ್ಚುಕಟ್ಟಾಗಿ ಪೂರೈಸಿದ ಪಿಎಫ್ ಐ ಯ ಕಾವಳಾಲುಗಳಿಗೆ ಅಲ್ಲಾಹನು ತಕ್ಕ ಪ್ರತಿಫಲ ನೀಡಲಿ.
ಈಗಾಗಲೇ ನೂರರಷ್ಟು ಪಿಪಿ ಕಿಟ್ ಗಳನ್ನು ತೆಗೆದಿಟ್ಟಿರುವ ಪಾಪ್ಯುಲರ್ ಫ್ರಂಟ್ ನ ಪೂರ್ವ ತಯಾರಿ ಮುಂದಲೋಚನೆಯನ್ನು ಮೆಚ್ಚತಕ್ಕದ್ದು.

ಖಬರ್ ಸ್ಥಾನದ ಸ್ಥಳಾವಕಾಶ ಒದಗಿಸಿದ ಬೋಳಾರ ಜುಮಾ ಮಸೀದಿಯ ಆಡಳಿತ ಮಂಡಳಿಗೆ ಅಲ್ಲಾಹನು ಅನುಗ್ರಹಿಸಲಿ.
ಸಕಾಲದಲ್ಲಿ ಸಹಕರಿಸಿದ ಜಿಲ್ಲಾ ಆರೋಗ್ಯ ಇಲಾಖೆ, ಮಾನ್ಯ ಜಿಲ್ಲಾಧಿಕಾರಿಗೆ ಕೃತಜ್ಞತೆಗಳು.
ಮಯ್ಯ್ತತ್ ನಮಾಝಿನ ನೇತೃತ್ವವಹಿಸಿದ ಬಂದರ್ ಹನೀಫ್ ಹಾಜಿ, ಕೊನೆಗಳಿಗೆಯಲ್ಲಿ ಸೇರಿಕೊಂಡ ಉಳ್ಳಾಲ ಜನಪ್ರತಿನಿಧಿ ಯುಟಿ ಕಾದರ್ ಗೂ ಅನಂತಾನಂತ ಧನ್ಯವಾದಗಳು ಎಂದು ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

ಕೋವಿಡ್ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಶಾಸಕ ಯು.ಟಿ.ಖಾದರ್ ಭಾಗಿ ಹಿನ್ನಲೆ ,ಘಟನೆ ಬಗ್ಗೆ ಶಾಸಕ ಯು.ಟಿ. ಖಾದರ್ ಸ್ಪಷ್ಟನೆ
ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡಬೇಕೆಂಬ ಭಾವನೆ ಬಂತು , ಹಾಗಾಗಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದೇನೆ.ಸೋಂಕಿತನ ಮೃತದೇಹದಿಂದ ವೈರಸ್ ಹರಡೋದಿಲ್ಲ ಮೃತದೇಹದಿಂದ ವೈರಸ್ ಹರಡುತ್ತೆ ಅಂತಾ ವೈದ್ಯಕೀಯ ಅಧ್ಯಯನ ಹೇಳಿಲ್ಲ.! ಹಾಗಾಗಿ ಪಿಪಿಐ ಕಿಟ್ ನ ಅಗತ್ಯ ಇಲ್ಲ. ಮಕ್ಕಳು ತಂದೆಯ ಹೆಣವನ್ನು ನೋಡೋಕೆ ಬರಲ್ಲ ಜನ ಅಷ್ಟು ಭಯಭೀತರಾಗಿದ್ದಾರೆ ,ಧಾರ್ಮಿಕ ವಿಧಿವಿಧಾನ ಮಾಡೋಕೆ ಜನರಿಗೆ ಹೆದರಿಕೆ ಇದೆ. ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೇ ಇರೋದು ತಪ್ಪು,ಆದರೆ ಜನರಿಗೆ ಮನವರಿಕೆ ಮಾಡಲು ನಾನು ಧರಿಸಿಲ್ಲ ,ಜನರು ಧಾರ್ಮಿಕ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ಮಾಡಬಹುದು.ಮಂಗಳೂರಿನಲ್ಲಿ ಶಾಸಕ ಯು.ಟಿ. ಖಾದರ್ ಸ್ಪಷ್ಟನೆ.

