- Advertisement -
- Advertisement -
ಮಂಗಳೂರು : ಯುಎಇಯಲ್ಲಿ ಕಷ್ಟದಲ್ಲಿ ಸಿಲುಕಿದ್ದ ಹಿರಿಯರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹಾಗು ಇತರ ಸಮಸ್ಯೆಯಲ್ಲಿದ್ದ 166 ಮಂದಿ “ಫ್ಲೈ ದುಬೈ” ಚಾರ್ಟರ್ಡ್ ವಿಮಾನದ ಮೂಲಕ ಜೂನ್ 23ರಂದು ಸಂಜೆ 7:20ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ.

ಎಂ.ಫ್ರೆಂಡ್ಸ್ ಮಂಗಳೂರು ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ಈ ಬಾಡಿಗೆ ವಿಮಾನದ ನೇತೃತ್ವವಹಿಸಿಕೊಂಡಿತ್ತು.
ಇಂದು ಸಂಜೆಯ ಸುಮಾರಿಗೆ ದುಬೈ ವಿಮಾನ ನಿಲ್ದಾಣದಿಂದ ಹೊರಟ ಫ್ಲೈ ದುಬೈ ವಿಮಾನವು ಸಂಜೆ 7.20ಕ್ಕೆ ಮಂಗಳೂರು ತಲುಪಿದೆ. ಟಿಕೆಟ್ ವೆಚ್ಚವನ್ನು ಪ್ರಯಾಣಿಕರೇ ಭರಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.


- Advertisement -