ಹೈನುಗಾರಿಕೆಗೆ ಉತ್ತೇಜನ ನೀಡಲು ರಾಜ್ಯ ಸರಕಾರ ಚಿಂತನೆಯನ್ನು ನಡೆಸಿದೆ. ಹಾಲು ಉತ್ಪಾದಕರಿಗೆ ಆಧಾರ ರಹಿತವಾಗಿ ಶೂನ್ಯ ಬಡ್ಡಿದರದಲ್ಲಿ 1.6 ಲಕ್ಷ ರೂಪಾಯಿ ವರೆಗೆ ಸಾಲ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ಕೇಂದ್ರ ಸರಕಾರ ಕೃಷಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಇದೀಗ ಹಾಲು ಉತ್ಪಾದಕರಿಗೆ ವಿಸ್ತರಿಸಲು ಮುಂದಾಗಿದೆ. ಈ ಯೋಜನೆಯಡಿಯಲ್ಲಿ ಹಾಲು ಉತ್ಪಾದಕರಿಗೆ ಆಧಾರರಹಿತವಾಗಿ ಶೂನ್ಯ ಬಡ್ಡಿದರದಲ್ಲಿ 1.6 ಲಕ್ಷ ರೂಪಾಯಿ ವರೆಗೆ ಸಾಲ ಲಭ್ಯವಾಗಲಿದೆ.
ಇನ್ನು 3 ಲಕ್ಷ ರೂಪಾಯಿ ವರೆಗೂ ಸಾಲ ಪಡೆಯಲು ಅವಕಾಶವಿದ್ದು, ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಸಾಲವನ್ನು ವಿತರಿಸುವವಾಗ ಶೇ.7ರ ಬಡ್ಡಿದರವನ್ನು ವಿಧಿಸಲಾಗುತ್ತದೆ. ಆದರೆ ಸಾಲ ಪಡೆದವರು ಸಕಾಲದಲ್ಲಿ ಸಾಲವನ್ನು ವಾಪಾಸ್ ಮಾಡಿದ್ರೆ ಕೇಂದ್ರ ಸರಕಾರದಿಂದ ನೀಡಲಾಗುವ ಶೇ.3ರಷ್ಟು ಬಡ್ಡಿದರದ ರಿಯಾಯಿತಿ ಸಿಗುತ್ತದೆ.ಹೀಗಾಗಿ ಹೈನುಗಾರರಿಗೆ 3 ಲಕ್ಷದ ವರೆಗಿನ ಸಾಲ ಶೇ.4ರ ಬಡ್ಡಿದರದಲ್ಲಿ ಲಭ್ಯವಾದಂತಾಗುತ್ತದೆ. ಈ ಯೋಜನೆಯನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಲಿದೆ ಎಂದು ಹೇಳಲಾಗುತ್ತಿದೆ.