

ಕುಂದಾಪುರ: ಬಾರ್ಕೂರು ಬಳಿಯ ಕೆರೆಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿ, ಯುವತಿಯೊಬ್ಬಳು ಗಂಭೀರ ಗಾಯಗೊಂಡ ಭಾನುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಬೀಜಾಡಿ ಬಳಿಯ ಗ್ಲಾಸ್ ಹಾಗೂ ಫ್ಲೇವುಡ್ ಅಂಗಡಿ ಮಾಲಕ ಸಂತೋಷ್ ಶೆಟ್ಟಿ(40) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ವಕ್ವಾಡಿಯ ಶ್ವೇತಾ(22) ಎಂಬವರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆ ಸಂತೋಷ್ ಶೆಟ್ಟಿಯವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಉಡುಪಿಯಿಂದ ಬಾರ್ಕೂರು ಮಾರ್ಗವಾಗಿ ಸಾಬರಕಟ್ಟೆಗೆ ತೆರಳುತ್ತಿದ್ದಾಗ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರು ತಡೆಗೋಡೆಯಿಲ್ಲದ ಚೌಳಿ ಕೆರೆಗೆ ಉರುಳಿ ಬಿದ್ದಿದೆ. ಕಾರು ಬೀಳುತ್ತಿರುವುದನ್ನ ಗಮನಿಸಿದ ಸ್ಥಳೀಯರು ಕೂಡಲೇ ಕೆರೆಗೆ ಹಾರಿ ಕಾರಿನಲ್ಲಿದ್ದವರನ್ನು ರಕ್ಷಣೆಗೆ ಮುಂದಾಗಿದ್ದರು.
ದುರದೃಷ್ಟವಶತ್ ಕಾರಿನಲ್ಲಿದ್ದ ಸಂತೋಷ್ ಶೆಟ್ಟಿ ನೀರಿನಿಂದ ಮೇಲೆ ಬರಲು ಅಗದೆ ಮೃತ ಪಟ್ಟರೆ ಕಾರಿನಲ್ಲಿದ್ದ ಯುವತಿಯನ್ನು ಸ್ಥಳೀಯರು ಮೇಲಕ್ಕೆತ್ತಿ ಬ್ರಹ್ಮಾವರದ ಮಹೇಶ್ ಅಸ್ಪತ್ರೆಗೆ ದಾಖಲಿಸಿದ್ದಾರೆ.

