ವಿಟ್ಲ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಎಸೈ ವಿನೋದ್ ಎಸ್ ನೇತೃತ್ವದ ಪೊಲೀಸರ ತಂಡ ಒಬ್ಬ ಆರೋಪಿ ಹಾಗೂ ಮದ್ಯಗಳನ್ನು ವಶಕ್ಕೆ ಪಡೆದ ಘಟನೆ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ನಡೆದಿದೆ.
ಡೆಸ್ಮನ್ ಜಾನ್ಸನ್ ಮಂತೇರೋ ಬಂಧಿತ ಆರೋಪಿ
ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ಡೆಸ್ಮನ್ ಜಾನ್ಸನ್ ಮಂತೇರೋ ಅವರ ಅಂಗಡಿಯ ಎದುರಿನಲ್ಲಿ ಸಾರ್ವಜನಿಕವಾಗಿ ವ್ಯಕ್ತಿಗಳು ಅಮಲು ಪದಾರ್ಥ ಕುಡಿಯುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಸ್ಥಳಕ್ಕೆ ಪೊಲೀಸರ ತಂಡ ತೆರಳಿದಾಗ ಕುಳಾಲು ಎಂಬಲ್ಲಿ ಡೆಸ್ಮನ್ ಜಾನ್ಸನ್ ಮಂತೇರೋ ಅವರ ಅಂಗಡಿಯ ಬಳಿ ತಲುಪಿದಾಗ ಒಬ್ಬ ವ್ಯಕ್ತಿಯು ಪ್ಲಾಸ್ಟಿಕ್ ಲೋಟದಲ್ಲಿ ಅಮಲು ಪದಾರ್ಥವನ್ನು ಕುಡಿಯುತ್ತಿದ್ದು ಪ್ಲಾಸ್ಟಿಕ್ ಲೋಟ ಹಾಗೂ 90 ಎಮ್ ಎಲ್ ನ ಖಾಲಿ ವಿಸ್ಕಿ ಟೆಟ್ರಾ ಪ್ಯಾಕ್‌ನ್ನು ಅಲ್ಲಿಯೇ ಬಿಸಾಡಿ ಅಂಗಡಿಯ ಹಿಂಬದಿಯ ಮಾರ್ಗದಲ್ಲಿ ಪರಾರಿಯಾಗಿದ್ದಾನೆ.
ಅಂಗಡಿಯ ಸುತ್ತ-ಮುತ್ತ ನೋಡಿದಾಗ ಮದ್ಯದ ಟೆಟ್ರಾ ಪ್ಯಾಕ್ ಗಳು ಪತ್ತೆಯಾಗಿದೆ. ಸುತ್ತಮುತ್ತ ಪರಿಶೀಲಿಸಿದಾಗ 90 ಎಮ್ ಎಲ್ ನ ಮದ್ಯದ ಖಾಲಿಯಾದ ಒಂದು ಟೆಟ್ರಾ ಪ್ಯಾಕ್, ಆರ್ಧ ನೀರು ತುಂಬಿದ 1 ಲೀಟರ್ ನ ಬಾಟ್ಲಿ, ಮೊದಲಾದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಕುಡಿಯಲು ಅವಕಾಶ ಮಾಡಿಕೊಟ್ಟ ಅಂಗಡಿ ಮಾಲಿಕ ಡೆಸ್ಮನ್ ಜಾನ್ಸನ್ ಮಂತೇರೋ ಎಂಬಾತನನ್ನು ಬಂಧಿಸಿದ್ದಾರೆ.