ಬೆಂಗಳೂರು:- ದೇಶದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಸತತ 20ನೇ ದಿನವೂ ಏರಿಕೆಯಾಗಿದೆ. ಇದಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ಇದೇ ಮೊದಲ ಬಾರಿಗೆ ಡೀಸೆಲ್ ರೂ.80 ಗಡಿದಾಟಿದೆ. ಇನ್ನು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.21 ಪೈಸೆ ಜಾಸ್ತಿಯಾಗಿದೆ.
ಕಳೆದ ಮೂರು ವಾರಗಳಲ್ಲಿ ಡೀಸೆಲ್ ಪ್ರತಿ ಲೀಟರ್ ಮೇಲೆ ರೂ.10.82 ಹಾಗೂ ಪೆಟ್ರೋಲ್ ರೂ.8.87 ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.85.59 ಹಾಗೂ ಡೀಸೆಲ್ ಬೆಲೆ ರೂ.76.25 ಆಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು?
ಬೆಂಗಳೂರು:
ಪೆಟ್ರೋಲ್: 82.52 ರೂ. (17 ಪೈಸೆ ಹೆಚ್ಚಳ)
ಡೀಸೆಲ್: 76.09 ರೂ. (13 ಪೈಸೆ ಹೆಚ್ಚಳ)
ದೆಹಲಿ:
ಪೆಟ್ರೋಲ್: 79.92 ರೂ. (16 ಪೈಸೆ ಹೆಚ್ಚಳ)
ಡೀಸೆಲ್: 80.02 ರೂ. (14 ಪೈಸೆ ಹೆಚ್ಚಳ)
ಮುಂಬೈ:
ಪೆಟ್ರೋಲ್: 86.70 ರೂ. (16 ಪೈಸೆ ಹೆಚ್ಚಳ)
ಡೀಸೆಲ್: 778.34 ರೂ. (12 ಪೈಸೆ. ಹೆಚ್ಚಳ)
ಚೆನ್ನೈ:
ಪೆಟ್ರೋಲ್: 83.18 ರೂ. (7 ಪೈಸೆ ಹೆಚ್ಚಳ)
ಡೀಸೆಲ್: 77.29 ರೂ. ( 5 ಪೈಸೆ ಹೆಚ್ಚಳ)