ವಿಟ್ಲ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನ ಹಿಂದೂ ರುದ್ರ ಭೂಮಿಗೆ ಇತ್ತೀಚೆಗೆ ದುಷ್ಕರ್ಮಿಗಳು ಶಿವ ದೇವರ ಮಹಾ ಮೂರ್ತಿಯ ಪೀಠದ ಮೇಲೆ ಚಪ್ಪಲಿ ಹಾಕಿ ಕುಣಿದು ಕುಪ್ಪಳಿಸಿ ವಿಕೃತ ಮೆರೆದ ದೇವರ ವಿಗ್ರಹ ಮತ್ತು ದೇವಭೂಮಿಯನ್ನು ಅಪವಿತ್ರಗೈದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯದ ವತಿಯಿಂದ ದೇವಭೂಮಿಯನ್ನು ಶುದ್ಧೀಕರಣ ಗೊಳಿಸಲಾಯಿತು
ದೇವಭೂಮಿ ಮತ್ತು ಶಿವನ ಮಹಾ ಮೂರ್ತಿಯನ್ನು ಅಶುದ್ಧ ಗೊಳಿಸಿ ವಿಕೃತ ಮೆರೆದ ಮತಾಂದರಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಶ್ರೀ ಕ್ಷೇತ್ರ ಅನ್ನಪ್ಪಾಡಿ ಶ್ರೀ ಈಶ್ವರಮಂಗಲ ಸದಾಶಿವ ದೇವರಲ್ಲಿ ಪ್ರಾರ್ಥಿಸಿದ ಅವರು ನಂತರ ಶೀ ಕ್ಷೇತ್ರದಿಂದಲೇ ವಿಧಿ ವಿಧಾನಗಳೊಂದಿಗೆ ಕಲಶ ಗಂಗಾಜಲ ತಂದು ಶುದ್ಧಿಗೊಳಿಸಿದರು.
ಸಜೀಪ ಮಾಗಣೆಯ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಅವರು ಶ್ರೀ ಶಿವನ ಮಹಾ ಮೂರ್ತಿಗೆ ಗಂಗಾಜಲ ಕಲಶಾಭಿಷೇಕ ಮಾಡುವ ಮೂಲಕ ಶುದ್ಧೀಕರಣ ಕಾರ್ಯವನ್ನು ನೆರವೇರಿಸಿದರು.
ಹಿಂದೂ ರುದ್ರ ಭೂಮಿಯ ಅಧ್ಯಕ್ಷ ಯಶವಂತ ದೇರಾಜೆ ಬೌದ್ಧಿಕ್ ನೀಡಿದರು.
ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕ ಮಿಥುನ್ ಪೂಜಾರಿ ಕಲ್ಲಡ್ಕ, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಸಹ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಸಜೀಪ, ಸಜೀಪ ವಲಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮನೋಹರ್ ಕರ್ಕೆರ, ಸಜೀಪ ವಲಯ ಭಜರಂಗದಳ ಸಂಚಾಲಕ ಶರತ್ ಸಜೀಪ, ದೇವಭೂಮಿ ಅಭಿವೃದ್ಧಿ ಸಮಿತಿ ಸದಸ್ಯ ಸುರೇಶ್ ಪೂಜಾರಿ ಶಾರ್ತಾವು, ದೇವಭೂಮಿ ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ರಾವ್ ಪತ್ತುಮುಡಿ, ಭಾಸ್ಕರ ಕಂಪದಕೋಡಿ, ರುದ್ರ ಭೂಮಿಯ ನಿರ್ವಾಹಕರಾದ ಭಾಸ್ಕರ ಬೆಳ್ಚಾಡ ಕಂಚಿನಡ್ಕ ಪದವು ಮತ್ತು ಹಲವಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.