ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆ, ಮಾಣಿ, ಕನ್ಯಾನ, ವಿಟ್ಲ ಭಾಗದ ಒಟ್ಟು 5ಕೇಂದ್ರಗಳಲ್ಲಿ ಸುಮಾರು 1339 ವಿದ್ಯಾರ್ಥಿಗಳು ಹಾಜರಾಗಿ ನಿರಾತಂಕವಾಗಿ ಪರೀಕ್ಷೆಯನ್ನು ಬರೆದಿದ್ದಾರೆ.
ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆಯಲ್ಲಿ 148 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಓರ್ವ ವಿದ್ಯಾರ್ಥಿನಿ ಹಾಜರಾಗಿಲ್ಲ. ವಿಠಲ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 360ಪರೀಕ್ಷೆ ಬರೆಯಬೇಕಾಗಿದ್ದು,2ವಿದ್ಯಾರ್ಥಿಗಳು ಗೈರಾಗಿದ್ದು,8 ವಲಸೆ ವಿದ್ಯಾರ್ಥಿಗಳಾಗಿದ್ದಾರೆ. ವಿಠಲ ಪ್ರೌಢ ಶಾಲೆಯ ಕೇಂದ್ರದಲ್ಲಿ318 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು,6 ವಿದ್ಯಾರ್ಥಿಗಳು ಗೈರಾಗಿದ್ದು, 9ವಲಸೆ ವಿದ್ಯಾರ್ಥಿಗಳಾಗಿದ್ದಾರೆ. ಮಾಣಿ ಕರ್ನಾಟಕ ಪ್ರೌಢ ಶಾಲೆಯ ಕೇಂದ್ರದಲ್ಲಿ 378ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು,6 ಹಾಜರಾತಿ ಕೊರತೆಯಿಂದ ಪರೀಕ್ಷಾ ಪ್ರವೇಶ ಪತ್ರವನ್ನು ಶಿಕ್ಷಣ ಇಲಾಖೆ ನಿರಾಕರಿಸಿದ ಕಾರಣ ಪರೀಕ್ಷೆಗೆ ಹಾಜರಾಗಿಲ್ಲ. ಓರ್ವ ವಲಸೆ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದಿದ್ದಾರೆ. ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 182 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, 9ವಿದ್ಯಾರ್ಥಿಗಳು ಹಾಜರಾಗಿಲ್ಲ ಮತ್ತು 3 ವಲಸೆ ವಲಸೆ ವಿದ್ಯಾರ್ಥಿಗಳಾಗಿದ್ದಾರೆ.
ಕಟ್ಟೆಚ್ಚರ:
ತಾಲೂಕು ವೈಧ್ಯಾಧಿಕಾರಿ ದೀಪಾ ಪ್ರಭು, ಸಿಡಿಪಿಒ ಸುಧಾ ಜೋಷಿ, ಕಂದಾಯ ಇಲಾಖೆಯ ಗ್ರಾಮ ಕರಣಿಕರಾದ ಪ್ರಕಾಶ್, ಸತೀಶ್, ಸುರಕ್ಷಾ, ಪ್ರಶಾಂತ್ ಟಿ. ಎಸ್., ಗ್ರಾಮಸಹಾಯಕರಾದ ಲಿಂಗಪ್ಪ ಗೌಡ, ಜಗನ್ನಾಥ ಅಳಿಕೆ, ವಿಶ್ವನಾಥ, ಮಹಮ್ಮದ್ ಕುಂಞಿ, ಸ್ಥಳೀಯ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಆಶಾಕಾರ್ಯಕರ್ತೆಯರು, ಸ್ಕೌಟ್ ಹಾಗೂ ಗೈಡ್ಸ್ ಸಂಸ್ಥೆಯ ಸ್ವಯಂ ಸೇವಕರು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಕೇಂದ್ರದ ಜವಾಬ್ದಾರಿಗಳನ್ನು ನಿಭಾಯಿಸಿದರು.