ಮಂಗಳೂರು:- ಮಂಗಳೂರು ನಗರದ ಕುದ್ರೋಳಿ ಜುಮ್ಮಾ ಮಸೀದಿಯ ಕೆರೆ ಅಭಿವೃದ್ಧಿಗೆ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರ ಪಾಲಿಕೆಯ ಕುದ್ರೋಳಿ ವಾರ್ಡಿನ ಜುಮ್ಮಾ ಮಸೀದಿಯ ಅವರಣದಲ್ಲಿ ಇರುವ ಕೆರೆ ಅಭಿವೃದ್ಧಿಗೆ ಸ್ಥಳೀಯ ಬಿಜೆಪಿ ಮುಖಂಡರಾದ ಅರ್ಶಾದ್ ಕುದ್ರೋಳಿ ಅವರು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಗಿದ್ದು ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು ಎಂದಿದ್ದಾರೆ.ಅಂತರ್ಜಲ ವೃದ್ಧಿಗೆ ಕೆರೆಗಳ ಅಭಿವೃದ್ಧಿ ಪೂರಕವಾಗಿದೆ. ಹಾಗಾಗಿ ಪಾಳು ಬಿದ್ದಿರುವ ಅಥವ ಜೀರ್ಣಾವಸ್ಥೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ನಾವು ವಿಶೇಷ ಮುತುವರ್ಜಿ ವಹಿಸಿ ಎಲ್ಲಾ ಕೆರೆಗಳ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್, ಸ್ಥಳೀಯ ಪಾಲಿಕೆ ಸದಸ್ಯರಾದ ಶಂಶುದ್ದೀನ್, ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿಯ ಖತೀಬರಾದ ರಿಯಾಯ್ ಫೈಯಿ ಕಕ್ಕಿಂಜೆ, ಸ್ಥಳೀಯ ಬಿಜೆಪಿ ಮುಖಂಡರಾದ ಅರ್ಷಾದ್ ಪೋಪಿ,ಭವಾನಿ ಶಂಕರ್, ರಂಗನಾಥ್,ರಾಜೇಶ್, ಶ್ಯಾಮ ಸುಂದರ್, ಮಸೀದಿಯ ಅದ್ಯಕ್ಷರಾದ ಪಝಲ್ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾರಿಸ್,ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು ನಗರ ಪಾಲಿಕೆಯ ಮರೋಳಿ ವಾರ್ಡಿನ ಜೋಡುಕಟ್ಟೆಯಲ್ಲಿ ಬಯಲು ರಂಗ ಮಂದಿರದ ಮುಂದುವರಿದ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಶಾಸಕ ಕಾಮತ್,ಬಯಲು ರಂಗ ಮಂದಿರದಲ್ಲಿಮರೋಳಿ ಪರಿಸರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುದರಿಂದ ಸಾರ್ವಜನಿಕರಿಗೆ ಉಪಯೋಗಕ್ಕಾಗಿ ಬಯಲು ರಂಗ ಮಂದಿರದ ಅವಶ್ಯಕತೆಯನ್ನು ಮನಗಂಡು ಮುಖ್ಯಮಂತ್ರಿ ವಿಶೇಷ ಅನುದಾನದಿಂದ 25 ಲಕ್ಷ ಬಿಡುಗಡೆಗೊಳಿಸಲಾಗಿದೆ. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ರೂಪಶ್ರೀ ಪೂಜಾರಿ, ಸ್ಥಳೀಯ ಮುಖಂಡರಾದ ಕಿರಣ್ ಮರೋಳಿ, ಜಗದೀಶ್ ಅಡು ಮರೋಳಿ,ಅನಿಲ್ ಕೆಂಬಾರ್, ಪ್ರಶಾಂತ್, ಲೋಕೇಶ್, ರಾಘವೇಂದ್ರ ಶೆಣೈ, ವೆಂಕಟರಾಯ ಶೆಣೈ, ಪ್ರವೀಣ್ ಶೆಟ್ಟಿ ನಿಡ್ಡೇಲ್, ನವೀನ್ ಪ್ರಭು, ವಿಜಯ್ ಕುಮಾರ್,ಯೋಗೀಶ್ ಕೆ. ಸರಳ, ಮಾಲತಿ ಶೆಟ್ಟಿ, ಸಮಾಜ ಸೇವಾ ಪ್ರತಿಷ್ಠಾನ ಅದ್ಯಕ್ಷ ಜ್ಯೋತಿ ಕುಮಾರ್, ಗಣೇಶೋತ್ಸವ ಸಮಿತಿ ಮರೋಳಿ ಜೋಡುಕಟ್ಟೆ ಇದರ ಅದ್ಯಕ್ಷ ಜಗದೀಶ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಅದ್ಯಕ್ಷ ವಿಠಲ್ ಶೆಣೈ ಮರೋಳಿ, ಅಯ್ಯಪ್ಪ ಸೇವಾ ಟ್ರಸ್ಟ್ ಅದ್ಯಕ್ಷ ಶರತ್ ಕೆಂಬಾರ್, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿಯ ಕಾರ್ಯಕರ್ತರು ಉಪಸ್ಥಿತರಿದ್ದರು.