ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಧ್ವಜಾರೋಹಣ, ಉದ್ಘಾಟನಾ ಸಮಾರಂಭ



ಶ್ರೀ ದೇವತಾ ಸಮಿತಿ ವಿಟ್ಲ ಆಶ್ರಯದಲ್ಲಿ 55 ನೇ ವರ್ಷದ ವಿಟ್ಲ ಶಾರದೋತ್ಸವ ಅ. 16 ನೇ ಶುಕ್ರವಾರದಿಂದ ಅ. 20 ನೇ ಮಂಗಳವಾರದವರೆಗೆ ನಡೆಯಲಿದೆ.
ಇಂದು ಅ. 16 ನೇ ಶುಕ್ರವಾರದಂದು ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಶ್ರೀ ಅನಂತೇಶ್ವರದ ದೇವರ ಸನ್ನಿಧಿಯಲ್ಲಿ ಹಾಗೂ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಶ್ರೀ ಮಾತೆಯ ವಿಗ್ರಹವನ್ನು ಶ್ರೀ ಚಂದ್ರನಾಥ ಸ್ವಾಮಿ ನವಿಲು ಬಸದಿಯಿಂದ ಆಕರ್ಷಣೀಯ ಮೆರವಣಿಗೆಯೊಂದಿಗೆ ನಂತರ ಸದನಕ್ಕೆ ತರಲಾಯಿತು. ಬಳಿಕ ಶ್ರೀರಾಮ ಮಂದಿರ ಹನುಮಗಿರಿಯ ಪುರೋಹಿತರು ವೇದಮೂರ್ತಿ ಶ್ರೀ ಎಂ. ವಿಕಾಸ್ ಭಟ್ ಮಾತೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿದರು.

ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ದೇವತಾ ಸಮಿತಿಯ ಗೌರವಾಧ್ಯಕ್ಷರು ಎಂ ರಾಧಾಕೃಷ್ಣ ನಾಯಕ್ರವರು ಧ್ವಜಾರೋಹಣ ನೆರವೇರಿಸಿ ವಿಟ್ಲ ಶಾರದೋತ್ಸವಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭವನ್ನು ಮಾಜಿ ಲೋಕಸಭಾ ಸದಸ್ಯರು, ನಿಕಟಪೂರ್ವ ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿದರು.





ದೇವತಾ ಸಮಿತಿಯ ಅಧ್ಯಕ್ಷ ನರ್ಸಪ್ಪ ಪೂಜಾರಿ ನಿಡ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸ್ವತಂತ್ರ ಹೆಚ್ಚುವರಿ ನಿರ್ದೇಶಕರು, ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಹಾಗೂ ಹೈಕೋರ್ಟ್ ನ ಹಿರಿಯ ನ್ಯಾಯವಾದಿಗಳು ಡಾ| ಅರುಣ್ ಶ್ಯಾಮ್, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ದೇವತಾ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಪೈ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಅಶೋಕ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ವಿಟ್ಲ ಅಧ್ಯಕ್ಷರು ಲ. ಡಾ| ಗಾಯತ್ರಿ ಜಿ, ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಯಕ್ಷಪ್ರಿಯೆ ಖ್ಯಾತಿಯ ಆರ್ಶೀಯಾ ತನು ವಿಟ್ಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ತುಳಸಿದಾಸ್ ಶೆಣೈ ಪ್ರಾರ್ಥಿಸಿ ರಾಘವೇಂದ್ರ ಪೈ ಸ್ವಾಗತಿಸಿದರು. ಸುದರ್ಶನ್ ಪಡಿಯಾರ್ ಕಾರ್ಯಕ್ರಮ ನಿರೂಪಿಸಿದರು.








