- Advertisement -
- Advertisement -
ನವದೆಹಲಿ: ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಯೋಗ ದಿನಾಚರಣೆ ಆಚರಿಸದಿರಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಜನರಿಗೆ ತಮ್ಮ ತಮ್ಮ ಮನೆಯಲ್ಲೇ ಕುಟುಂಬಸ್ಥರ ಜೊತೆ ಯೋಗ ಮಾಡುವಂತೆ ಮೋದಿ ಕರೆ ನೀಡಿದ್ದಾರೆ.
ದೇಶದ್ಯಾಂತ ಬೆಳಗ್ಗೆ ಏಳು ಗಂಟೆಗೆ ಮನೆಯಲ್ಲಿ ಯೋಗ ದಿನ ಆಚರಿಸಲು ಕರೆ ನೀಡಿರುವ ಪ್ರಧಾನಿ ಮೋದಿ ಸ್ವತಃ ತಾವು ಮನೆಯಲ್ಲಿ ಯೋಗ ಮಾಡಿದ್ದಾರೆ. ದೆಹಲಿಯ ಲೋಕ ಕಲ್ಯಾಣ ಮಾರ್ಗ್ ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಅವರು 45 ನಿಮಿಷಗಳ ಯೋಗ ಮಾಡಿದ್ದಾರೆ.
ಯೋಗದಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಕೊರೊನಾ ವಿರುದ್ಧ ಹೋರಾಟ ಮಾಡಬಹುದು. ಆದ್ದರಿಂದ ಆರೋಗ್ಯ ವೃದ್ಧಿಗೆ ಯೋಗ ಬಹು ಮುಖ್ಯ. ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯವಾಗಿದೆ.
ಅಲ್ಲದೇ ಈ ಮಾರಕ ಕೊರೊನಾ ವೈರಸ್ ಹೋಗಲಾಡಿಸಲು ಯೋಗ ಪರಿಣಾಮಕಾರಿ. ಹೀಗಾಗಿ ಪ್ರತಿಯೊಬ್ಬರೂ ಕೂಡ ಯೋಗ ದಿನವನ್ನು ಆಚರಿಸುವಂತೆ ಮೋದಿ ಕರೆ ನೀಡಿದ್ದಾರೆ.
- Advertisement -