



ಕರಿಬೇವಿನ ಸೊಪ್ಪನ್ನು ಪ್ರತಿಬಾರಿ ಅಂಗಡಿಯಿಂದ ತರುವ ಬದಲು ಮನೆಯ ಹಿತ್ತಲಲ್ಲೇ ಬೆಳೆದು ಬಳಸುವುದು ಒಳ್ಳೆಯದು ಹಾಗೂ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಸೊಪ್ಪು ಎಂದರೆ ಅದು ಕರಿಬೇವು. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಎಲೆಗಳಿಲ್ಲದೆ ಅಪೂರ್ಣ ಎಂದೆನಿಸುತ್ತವೆ. ಕರಿಬೇವಿನ ಸೊಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ, ಇದು ಆರೋಗ್ಯಕ್ಕೂ ಕೂಡ ಅಮೃತವಿದ್ದಂತೆ ಎಂದು ನಿಮಗೆ ತಿಳಿದಿದೆಯೇ? ಈ ಲೇಖನದಲ್ಲಿ ಕರಿಬೇವಿನ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ…
ಸಾಧ್ಯವಾದಷ್ಟು ಕರಿಬೇವಿನ ಸೊಪ್ಪನ್ನು ತಂದ ದಿನವೇ ಅಥವಾ ಮರುದಿನದೊಳಗೆ ಬಳಸಿ. ಇದನ್ನು ಸಂಗ್ರಹಿಸಿಟ್ಟರೆ ಅದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳು ನಾಶವಾಗುತ್ತವೆ. ನಿತ್ಯ ಇದನ್ನು ಸೇವಿಸುವುದರಿಂದ ಅಜೀರ್ಣತೆ, ಮಲಬದ್ಧತೆ ವಾಂತಿ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಸಂಗ್ರಹಿಸಿಟ್ಟ ಸೊಪ್ಪಿನಿಂದ ಈ ಪ್ರಯೋಜನಕ್ಕೆ ಬರುವುದಿಲ್ಲ.
ಕರಿಬೇವಿನ ಸೊಪ್ಪನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗಿ ಸೊಂಪಾಗಿ ದಪ್ಪಗೆ ಬೆಳೆಯುತ್ತದೆ. ಅಲ್ಲದೆ ಕೂದಲು ಉದುರುವ ಸಮಸ್ಯೆಯೂ ದೂರವಾಗುತ್ತದೆ. ಆದರೆ ನಾಲ್ಕಾರು ದಿನ ಸಂಗ್ರಹಿಸಿಟ್ಟ ಕರಿಬೇವಿನಿಂದ ಈ ಪ್ರಯೋಜನವಿಲ್ಲ ಹಾಗೂ ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ ಆಗಿದೆ. ಇದು ಮಲಬದ್ಧತೆ, ಆಮ್ಲೀಯತೆ, ಉಬ್ಬುವುದು ಸೇರಿದಂತೆ ಎಲ್ಲಾ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.