- Advertisement -
- Advertisement -
ವಿಟ್ಲ: ಪುತ್ತೂರಿನ ಆಸ್ಪತ್ರೆಯಲ್ಲಿ ಬೇರೆ ಬೇರೆ ಕಾರಣಕ್ಕೆ ದಾಖಲಾಗಿದ್ದ ವಿಟ್ಲ ಅನಂತಾಡಿ ಹಾಗೂ ಪುಣಚದ ಇಬ್ಬರು ಮಹಿಳೆಯರಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ವಿಟ್ಲದ ಸಮೀಪದ ಅನಂತಾಡಿ ಮಾಣಿಯ ನಿವಾಸಿ ಮಹಿಳೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಅದೇ ರೀತಿ ಪುಣಚದ ಮಹಿಳೆ ಕೂಡಾ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಂದರ್ಭ ಕೊವಿಂಡ್ ಪರೀಕ್ಷೆ ನಡೆಸಲಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ.
ಇವರಿಬ್ಬರಲ್ಲಿ ಯಾವುದೇ ರೋಗದ ಲಕ್ಷಣಗಳಿರಲಿಲ್ಲ. ಇಬ್ಬರು ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದರು ಎಂದು ತಿಳಿದು ಬಂದಿದೆ.
- Advertisement -