Thursday, June 18, 2026
spot_imgspot_img
spot_imgspot_img

ಉತ್ತರಪ್ರದೇಶ: ಮತಾಂತರಗೊಂಡು ಮದುವೆಯಾಗಬೇಕೆಂದು ಒತ್ತಾಯಿಸಿದ ಕಾರಣಕ್ಕೆ ಹಿಂದೂ ಯುವತಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಯುವತಿಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಲು ನಿರಾಕರಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಶಾರುಖ್ (24) ಬಂಧಿತ ಆರೋಪಿ.

ಯುವತಿ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಿದ್ದು, ಆರೋಪಿ ತನ್ನನ್ನು ಸೌರಭ್ ಎಂದು ಗುರುತಿಸಿಕೊಂಡಿದ್ದ.

ಸಾಮಾಜಿಕ ಅವಮಾನದಿಂದ ತಪ್ಪಿಸಿಕೊಳ್ಳಲು ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸುತ್ತಿದ್ದ. ಅಷ್ಟೇ ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದೇ ಹೋದರೆ ಕೊಂದು ಹಾಕುತ್ತನೆ ಎಂದು ಬೆದರಿಸಿದ್ದು, ಇದರಿಂದ ಬೇಸತ್ತ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಬಂದಿದೆ. 

ಯುವತಿಯ ತಂದೆ ತನ್ನ ಮಗಳಿಗೆ ಆರೋಪಿ ಕಿರುಕುಳ ನೀಡಿ ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಅಲ್ಲದೇ ಶಾರುಖ್ ತನ್ನ ಮಗಳ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಉಪಯೋಗಿಸಿದ್ದು , ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮದುವೆಯಾಗುವಂತೆ ಬೆದರಿಕೆ ಹಾಕಿದ್ದಾನೆ ಎಂದು ಎಸಿಪಿ ಬಳಿ ಹೇಳಿಕೊಂಡಿದ್ದಾರೆ. 

- Advertisement -

Related news

error: Content is protected !!