Sunday, June 29, 2025
spot_imgspot_img
spot_imgspot_img

ಉಡುಪಿ: ಅನುಮತಿ ಇಲ್ಲದೆ ತಡರಾತ್ರಿವರೆಗೆ ಡಿಜೆ ಕುಣಿತ- ದಾಳಿ ನಡೆಸಿದ ಪೊಲೀಸರು

- Advertisement -
- Advertisement -

ಉಡುಪಿ: ಮನೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ಅವಧಿ ಮೀರಿ ತಡರಾತ್ರಿವರೆಗೆ ಅತೀ ಕರ್ಕಶವಾದ ಡಿ.ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದ ವ್ಯಕ್ತಿಯ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರು ಗ್ರಾಮದ ಕೊಡಂಕೂರು ಪುತ್ರನ್ ಗ್ಯಾಸ್ ಗೋಡಾನ್ ಬಳಿಯ ನಿವಾಸಿ ರವಿರಾಜ್ ಆಪಡಿತ ವ್ಯಕ್ತಿ.

ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ತಡರಾತ್ರಿ ಆಪಾದಿತ ರವಿರಾಜ್ ಮನೆಯ ಅಂಗಳದಲ್ಲಿ ಮೆಹೆಂದಿ ಕಾರ್ಯಕ್ರಮದ ನಿಮಿತ್ತ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಇಲ್ಲದೆ ತಡರಾತ್ರಿ ವರೆಗೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್ ಹಾಕಿಕೊಂಡು ನೃತ್ಯ ಮಾಡುತ್ತಿದ್ದು ಕಂಡು ಬಂದಿದೆ.

ಈ ವೇಳೆ ಸ್ಥಳಕ್ಕೆ ತೆರಳಿದ ಪೊಲೀಸರು ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರರಣ ದಾಖಲಾಗಿದೆ.

- Advertisement -

Related news

error: Content is protected !!