- Advertisement -
- Advertisement -
ಉಡುಪಿ: ಪಿಎಫ್ಐ ಸಂಘಟನೆ ಮುಖಂಡರ ಮನೆ ಮೇಲೆ ಮಂಗಳವಾರ ಬೆಳಗಿನ ಜಾವ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ನಾಲ್ವರು ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ ಆದಿ ಉಡುಪಿ, ಹೂಡೆ, ಗಂಗೊಳ್ಳಿ ಮತ್ತು ಬೈಂದೂರು ಸೇರಿ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಹೂಡೆ ಪಿಎಫ್ಐ ಮುಖಂಡ ಇಲ್ಯಾಸ್ ಹೂಡೆಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದಿ ಉಡುಪಿಯ ಪಿ.ಎಫ್.ಐ ಮುಖಂಡ ಅಶ್ರಫ್ , ಆಶಿಕ್ ಕೋಟೇಶ್ವರ, ರಜಬ್ ಗಂಗೊಳ್ಳಿ ಮತ್ತು ಖಲೀಲ್ ಸೈಯದ್ ಅವರನ್ನು ಕುಂದಾಪುರ ಹಾಗೂ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
- Advertisement -