Monday, June 30, 2025
spot_imgspot_img
spot_imgspot_img

ಉಡುಪಿ: 26 ವರ್ಷದ ಯುವತಿ ನಾಪತ್ತೆ!

- Advertisement -
- Advertisement -

ಉಡುಪಿ: ಉಡುಪಿಯಲ್ಲಿ 26 ವರ್ಷದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದವಳು ಪವಿತ್ರಾ(26) ಉಡುಪಿ ಜಿಲ್ಲೆಯ ಶಿರ್ವ ಗ್ರಾಮದ ಕೋಡುಗುಡ್ಡೆ ಹೌಸ್ ಎನ್ನಲಾಗಿದೆ.

ಅಕ್ಟೋಬರ್ 26ರಂದು ಸುಮಾರು 8.30ಯ ಸಮಯಕ್ಕೆ ಕೋಡುಗುಡ್ಡೆ ಮನೆಯಿಂದ ಹೊರಗೆ ಹೋದವರು ಮನೆಗೆ ಮರಳಿ ಬಂದಿಲ್ಲ ಎನ್ನಲಾಗಿದೆ. ಪವಿತ್ರಾ ಅವರು 5 ಅಡಿ 2 ಇಂಚು ಎತ್ತರವಿದ್ದು, ಬಿಳಿ ಮೈಬಣ್ಣ ಸಪೂರ ಶರೀರ, ಕೇಸರಿ ಬಣ್ಣದ ಚೂಡಿದಾರ, ಹಸಿರುಬಣ್ಣದ ಪ್ಯಾಂಟ್ ಧರಿಸಿದ್ದು, ಮೂಗಿನ ಮೇಲೆ ಹಳೆಗಾಯದ ಗುರುತು ಇದೆ. ಕನ್ನಡ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ವಿಭಾಗ, ದೂ.ಸಂಖ್ಯೆ :08258-231333-9480805421, ಪೋಲಿಸ್ ವೃತ್ತ ನೀರೀಕ್ಷಕರು ಕಾಪು, ವೃತ್ತ ಕಚೇರಿ ದೂ.ಸಂಖ್ಯೆ : 0820-2552133, 94808054431, ಅಥವಾ ಶಿರ್ವ ಪೋಲಿಸ್ ಠಾಣೆದೂ.ಸಂಖ್ಯೆ : 0820-2554139, 9480805451 ನ್ನು ಸಂಪರ್ಕಿಸ ಬಹುದಾಗಿದೆಂದು ಶಿರ್ವಾ ಪೋಲಿಸ್ ಉಪನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!