Monday, July 7, 2025
spot_imgspot_img
spot_imgspot_img

ಐಪಿಎಲ್ 2021: ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 10 ರನ್ ಗಳ ಜಯ ಗಳಿಸಿದ ಮುಂಬೈ ಇಂಡಿಯನ್ಸ್

- Advertisement -
- Advertisement -

ಮುಂಬೈ: ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ
ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 10 ರನ್ ಗಳಿಂದ ಗೆಲುವು ಸಾಧಿಸಿದೆ.

ಇದರೊಂದಿಗೆ ಐಪಿಎಲ್ 2021ನೇ ಸಾಲಿನಲ್ಲಿ ಮುಂಬೈ ತಂಡ ಮೊದಲ ಗೆಲುವು ದಾಖಲಿಸಿದೆ. ಒಂದು ಹಂತದಲ್ಲಿ ಕೋಲ್ಕತ್ತ ಗೆಲುವು ದಾಖಲಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ರಾಹುಲ್ ಚಹರ್ ( 4 ವಿಕೆಟ್), ಬೋಲ್ಟ್ (2 ವಿಕೆಟ್) ಹಾಗೂ ಕೃುಣಾಲ್ ಪಾಂಡ್ಯ (13ಕ್ಕೆ 1 ವಿಕೆಟ್) ನಿಖರ ದಾಳಿ ಸಂಘಟಿಸಿ ಪಂದ್ಯದಲ್ಲಿ ತಿರುಗೇಟು ನೀಡುವಲ್ಲಿ

ಅತ್ತ ಕೋಲ್ಕತ್ತದ ಆ್ಯಂಡ್ರೆ ರಸೆಲ್ ಐದು ವಿಕೆಟ್ ಸಾಧನೆ ಮತ್ತು ಬ್ಯಾಟಿಂಗ್‌ನಲ್ಲಿ ನಿತೀಶ್ ರಾಣಾ ಸತತ ಎರಡನೇ ಅರ್ಧಶತಕದ ಹೋರಾಟವು ವ್ಯರ್ಥವೆನಿಸಿದೆ. ಅಂತಿಮವಾಗಿ ಕೋಲ್ಕತ್ತ ಏಳು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕೊನೆಯ ಓವರ್ ನಲ್ಲಿ ಬೌಲ್ಟ್ ಮಿಂಚಿನ ದಾಳಿ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಂಡಿದ್ದು, ಮುಂಬೈ ಇಂಡಿಯನ್ಸ್‌ ತಂಡವು ಜಯಗಳಿಸಿದೆ.

18ನೇ ಓವರ್‌ ನಲ್ಲಿ ಉತ್ತಮ ಎಸೆತಗಾರಿಕೆಯನ್ನು ತೋರಿದ ಜಸ್ಪ್ರೀತ್ ಬುಮ್ರಾ ಹಾಗೂ ಕೊನೆಯ ಓವರ್‌ ನಲ್ಲಿ ಎರಡು ಪ್ರಮುಖ ವಿಕೆಟ್‌ ಗಳನ್ನು ಕಬಳಿಸಿದ ಟ್ರೆಂಟ್‌ ಬೌಲ್ಟ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ರೋಚಕ ಜಯ ಸಾಧಿಸಿತು.

- Advertisement -

Related news

error: Content is protected !!