Monday, June 30, 2025
spot_imgspot_img
spot_imgspot_img

ಕರಾವಳಿಗೂ ಕಾಲಿಟ್ಟ ಗೋಣಿಚೀಲದ ಬಟ್ಟೆ..!!

- Advertisement -
- Advertisement -

ಮಂಗಳೂರು: ಈಗಂತು ಫ್ಯಾಷನ್​ ಯಾವ ಮಟ್ಟಕ್ಕೆ ಹೋಗಿದೆ ಎಂದು ಊಹೆ ಮಾಡೋದು ತುಂಬಾ ಕಷ್ಟ. ಫ್ಯಾಷನ್ ಲೋಕದಲ್ಲಿ ಗೋಣಿಚೀಲದ ಬಟ್ಟೆ ಟ್ರೆಂಡಿಂಗ್‌ ಆಗಿದೆ. ಇಂತಹ ಚಿತ್ರ-ವಿಚಿತ್ರವಾದ ಉಡುಗೆ ತೊಡುಗೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾ ಇರುತ್ತವೆ. ಈಗ ಇಂತಹದೇ ಬಟ್ಟೆ ಕರಾವಳಿಗೂ ಕಾಲಿಟ್ಟಿದೆ.

ನಗರದ ಕಂಕನಾಡಿಯ ಶಾಲಿಮಾರ್ ಕಾಂಪ್ಲೆಕ್ಸ್‌’ನಲ್ಲಿರುವ ಮಳಿಗೆಯಲ್ಲಿ ಗೋಣಿ ಚೀಲ ಬಟ್ಟೆ ಗಮನ ಸೆಳೆಯುತ್ತಿದೆ.

ನಟಿ ಉರ್ಫಿ ಜಾವೇದ್ ಗೋಣಿ ಚೀಲವನ್ನು ಬಳಸಿಕೊಂಡು ಅದನ್ನ ತುಂಡುಮಾಡಿ ಬಟ್ಟೆಯ ವಿನ್ಯಾಸದ ಆಕೃತಿಯಲ್ಲಿ ರಚಿಸಿ ಧರಿಸಿದ್ದ ತಮ್ಮ ಬೋಲ್ಡ್‌ ಅವತಾರದೊಂದಿಗೆ ಸಿಕ್ಕಾಪಟ್ಟೆ ಸುದ್ದಿಯಾದ ವೀಡಿಯೋ ವೈರಲ್ ಆದ ಬಳಿಕ ಗೋಚಿ ಚೀಲ ಬಟ್ಟೆ ಹೆಚ್ಚು ಜನಪ್ರಿಯವಾಗಿತ್ತು. ಹಲವು ವಿನ್ಯಾಸಕಾರರು ಇದನ್ನೇ ಪ್ರೇರಣೆಯಾಗಿಟ್ಟುಕೊಂಡು ಗೋಣಿ ಚೀಲದಿಂದ ಪ್ಯಾಂಟ್, ಅಂಗಿ ಮತ್ತಿತರ ವಸ್ತ್ರಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

ಮಂಗಳೂರಿನ ಬಟ್ಟೆ ಮಳಿಗೆಯಲ್ಲೂ ಗೋಣಿ ಚೀಲದ ಅಂಗಿ ವಿಂಡೋ ಪ್ರದರ್ಶನಕ್ಕಿಟ್ಟಿದ್ದಾರೆ. ಇದರ ಬೆಲೆ Rs.4,899/- ನಿಗದಿಪಡಿಸಲಾಗಿದೆ ಎಂದು ಮಳಿಗೆ ಮಾಲಕ ತಿಳಿಸಿದರು.

- Advertisement -

Related news

error: Content is protected !!