- Advertisement -
- Advertisement -


ಕಲ್ಲಡ್ಕ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ ಮಂಗಳೂರು ಜಿಲ್ಲೆ ಇದರ ಶ್ರೀ ರಾಮ ಮಂದಿರ ಕಲ್ಲಡ್ಕ ಶಾಖೆ ಹಾಗೂ ನೇತಾಜಿ-ಕಲ್ಲಡ್ಕ ಶಾಖೆಯ ಜಂಟಿ ಆಶ್ರಯದಲ್ಲಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಜರಗಿತು.

ಸ್ವಾತಂತ್ರ್ಯೋತ್ಸವ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಬೌಧಿಕನ್ನು ಮನೋಜ್ ಬಿ ಉಳ್ಳಾಲ ನಡೆಸಿಕೊಟ್ಟರು. ಹಣತೆ ದೀಪದಿಂದ ಕಂಗೊಲಿಸುತ್ತಿರುವ ಅಖಂಡ ಬಾರತದ ಚಿತ್ರ ಹಾಗೂ ಭಾರತ ಮಾತೆಗೆ ಅನಿತ, ಅನುಷ ಹಾಗೂ ಪದ್ಮಾವತಿ ಆರತಿಯನ್ನು ಬೆಳಗಿಸಿದರು. ಅನಂತರ ಎಲ್ಲರೂ ಒಟ್ಟಾಗಿ ವಂದೇಮಾತರಂ ಹಾಡಿದರು.
ಇಂದಿನ ಯೋಗ ತರಗತಿಯನ್ನು ದಿನೇಶ್ ಆರ್, ಭಜನೆಯನ್ನು ರತ್ನಾಕರ್ ಪ್ರಭು, ಅಮೃತವಚನ ಮತ್ತು ಪಂಚಾಂಗವನ್ನು ಅನಿತರವರು ನಡೆಸಿಕೊಟ್ಟರು. ಕಾರ್ಯಕ್ರಮ ಸ್ವಾಗತ ಉದಯ ಹಾಗೂ ನಿರೂಪಣೆಯನ್ನು ರೋಶನ್ ನಡೆಸಿಕೊಟ್ಟರು.



- Advertisement -