Friday, August 19, 2022
spot_imgspot_img
spot_imgspot_img

ಕಾರ್ಕಳ: ಸ್ವಿಪ್ಟ್ ಕಾರಿನಲ್ಲಿ ಅಕ್ರಮ ಗೋ ಸಾಗಾಟ: ಓರ್ವನ ಬಂಧನ, ಮತ್ತೊರ್ವ ಪರಾರಿ; ಚಿತ್ರಹಿಂಸೆಗೆ ಕಾರಿನಲ್ಲೇ ಬಲಿಯಾದ ಗೋವು

- Advertisement -G L Acharya G L Acharya
- Advertisement -

ಕಾರ್ಕಳ: ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಉಡುಪಿಯ ಮಲ್ಪೆ ಹೂಡೆಯಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಸಹೋದರರಾದ ಶಕೀಲ್ ಅಹಮದ್ ಮತ್ತು ಅಖಿಲ್ ಅಹಮದ್ ಬಂಧಿತ ಆರೋಪಿಗಳು.

ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ತಲ್ವಾರು ತೋರಿಸಿ ದನ ಕದಿಯುತ್ತಿದ್ದ ಸಹೋದರರು ಬೇಳಂಜೆ ಗ್ರಾಮದ ಈಸರಗದ್ದೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಮಲಗಿದ ಎರಡು ಜಾನುವಾರುಗಳನ್ನು ಕಳವು ಮಾಡಿ ಕಾರಿನಲ್ಲಿ ಹಿಂಸಾತ್ಮಾಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಿಸುತ್ತಿರುವಾಗ ಖಚಿತ ಮಾಹಿತಿಯ ಮೇರೆಗೆ ಹೆಬ್ರಿ ಪೊಲೀಸರು ಅವರನ್ನು ಸೆರೆಹಿಡಿದಿದ್ದಾರೆ.

ಈ ವೇಳೆ ಒಬ್ಬಾತ ಕಾಡಿಗೆ ಓಡಿ ಹೋಗಿ ಪರಾರಿಯಾಗಿದ್ದಾನೆ. ಇನ್ನು ಸಿಕ್ಕಿ ಬಿದ್ದ ಮತ್ತೋರ್ವ ಆರೋಪಿ ಕಾರು ಚಾಲಕ ದನಗಳನ್ನು ಕೊಂಡು ಹೋಗಿ ವಧೆ ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಹೋಗುತ್ತಿದ್ದೆವು ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ದನಗಳನ್ನು ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿಸಿದ ಪರಿಣಾಮ ಕುತ್ತಿಗೆ ಮುರಿದು ಒಂದು ದನ ಸಾವಿಗೀಡಾಗಿತ್ತು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!