- Advertisement -



- Advertisement -
ಕಾಸರಗೋಡು: ಪೊಲೀಸ್ ಸಿಬ್ಬಂದಿಯೋರ್ವರು ಹೃದಯಾಘಾತ ಸಂಭವಿಸಿ ಠಾಣೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾಸರಗೋಡಿನ ಆದೂರಿನಲ್ಲಿ ನಡೆದಿದೆ.
ಪೆರ್ಲಡ್ಕ ಪೊಯಿನಾ ನಿವಾಸಿ ರಾಮನ್ ಮಣಿಯಾಣಿ ಮತ್ತು ಕಲ್ಯಾ ಣಿ ದಂಪತಿಯ ಪುತ್ರ ಕೆ. ಅಶೋಕ್ (48) ಮೃತ ಪಟ್ಟವರು. ಬೆಳಗಿನ ಜಾವವರೆಗೆ ಸಹೋದ್ಯೋಗಿಗಳೊಂದಿಗೆ ಕರ್ತವ್ಯದಲ್ಲಿದ್ದ ಅಶೋಕ್, 5 ಗಂಟೆಗೆ ಶೌಚಾಲಯಕ್ಕೆ ಹೋಗಿದ್ದಾರೆ. ಆರು ಗಂಟೆಯಾದರೂ ಬಾರದೇ ಇದ್ದಾಗ ವಿಶ್ರಾಂತಿ ಕೊಠಡಿಯೊಳಗೆ ಪರಿಶೀಲನೆ ನಡೆಸಿದಾಗ ಅಲ್ಲಿಯೂ ಇರಲಿಲ್ಲ.

ಬಳಿಕ ಶೌಚಾಲಯ ಹೋಗಿ ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿ ಇದ್ದರು. ತಕ್ಷಣವೇ ಮುಳ್ಳೇರಿಯಾ ವೈದ್ಯ ಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಆಗಲೇ ಮೃತ ಪಟ್ಟಿದ್ದರು.
ಮೃತರು ಪತ್ನಿ ಸೌಮ್ಯ . ಮಕ್ಕಳಾದ ತೇಜಲಕ್ಷ್ಮಿ ಮತ್ತು ಗೌತಮ್ ಅವರನ್ನು ಅಗಲಿದ್ದಾರೆ.
- Advertisement -