

ಕಾಸರಗೋಡು: ಯುವಕನೋರ್ವ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ತೃಕ್ಕರಿಪುರ ಮಟ್ಟಮ್ಮಲ್‌ನಲ್ಲಿ ಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು,ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಎಂ.ಪ್ರಿಯೇಶ್ (32) ಎಂಬಾತ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ.ಇದೀಗ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತೃಕ್ಕರಿಪುರ ಪಾರಪ್ಪಾಡ್ ನ ಮುಹಮ್ಮದ್ ಶಬಾಸ್ (22) ಮತ್ತು ಮುಹಮ್ಮದ್ ರಹನಾಸ್ (23) ಬಂಧಿತರು.

ಇದೊಂದು ಕೊಲೆ ಕೃತ್ಯವಾಗಿದ್ದು, ಕೃತ್ಯದಲ್ಲಿ ನೆರವಾಗಿ ಶಾಮೀಲಾಗಿದ್ದ ಸಫ್ವಾನ್ (25) ಸೇರಿ ಮೂವರ ಬಂಧನ ಇನ್ನೂ ನಡೆಯಬೇಕಿದೆ.
ಘಟನೆಯ ವಿವರ:
ಸೌತ್ ತೃಕರಿಪುರ ಬಳಿಯ ಮೊಟ್ಟಮ್ಮಲ್ ವಯಲೋಡಿ ಪರಿಶಿಷ್ಟ ಜಾತಿ ಕಾಲನಿಯ ನಿವಾಸಿ ಕೊಡಕ್ಕಲ್ ಕೃಷ್ಣನ್ ಅಮ್ಮಿಣಿ ದಂಪತಿಯ ಪುತ್ರ ಪಯ್ಯನ್ನೂರು ಖಾಸಗಿ ಸಂಸ್ಥೆಯೊಂದರ ನೌಕರ ಎಂ. ಪ್ರಿಯೇಶ್ (32)ರ ಸಾವು ಕೊಲೆಯಾಗಿದೆಂದು ಈ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.
ಇದಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದರು.
ರಾತ್ರಿ ಮೀನು ಖರೀದಿಸಿ ಮನೆಗೆ ಬಂದು ಅದನ್ನು ತಾಯಿಯ ಕೈಗೆ ನೀಡಿ ಊಟ ತಯಾರಾಗುವ ವೇಳೆ ನಾನು ಹಿಂತಿರುಗುವೆ ಎಂದು ಬೈಕ್‌ನಲ್ಲಿ ಪ್ರಿಯೇಶ್ ಹೊರಗೆ ಹೋಗಿದ್ದರು. ತಡರಾತ್ರಿಯಾದರು ಅವರು ಮನೆಗೆ ಹಿಂತಿರುಗದೇ ಇರುವುದನ್ನು ಗಮನಿಸಿದ ತಾಯಿ ಪ್ರಿಯೇಶ್ ಕರೆ ಮಾಡಿದಾಗ ಫೋನ್ ಸ್ವಿಆಫ್ ಆಗಿತ್ತು. ಬಳಿಕ ಮನೆಯಿಂದ ನೂರು ಮೀಟರ್ ದೂರದಲ್ಲಿ ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪ್ರಿಯೇಶ್ ಪತ್ತೆಯಾಗಿದ್ದರು.
ಆ ವೇಳೆ ಕೇವಲ ಪ್ಯಾಂಟ್ ಮಾತ್ರ ಧರಿಸಿದ್ದು, ದೇಹವೆಲ್ಲಾ ಕೆಸರಿನಿಂದ ಆವೃತ್ತವಾಗಿತ್ತು, ಪೊಲೀಸರು ಆ ಪರಿಸರದ ಸಿಸಿಟಿವಿ ದೃಶ್ಯಗಳನ್ನೆಲ್ಲಾ ಪರಿಶೀಲಿಸಿದರು. ಅದರಿಂದ ಲಭಿಸಿದ ಕೆಲವೊಂದು ದೃಶ್ಯಗಳ ಆಧಾರದಲ್ಲಿ ಪೊಲೀಸರು ಐದು ಮಂದಿಯನ್ನು ವಿಚಾರಿಸಿದ ಬಳಿಕ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ಆರಂಭಿಸಿದ್ದಾರೆ
ಕೊಲೆಯಾದ ಪ್ರಿಯೇಶ್ ಮೊಬೈಲ್ ನಾಪತ್ತೆಯಾಗಿದ್ದು, ಅದರ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದರೆ. ಅದು ಲಭಿಸಿದಲ್ಲಿಈ ಕೊಲೆ ಪ್ರಕರಣದ ಕುರಿತಾದ ಹೆಚ್ಚಿನ ಮಾಹಿತಿ ಲಭಿಸುವ ಸಾಧ್ಯತೆ ಇದೆಯೆಂದು ಪೊಲೀಸರು ತಿಳಿಸಿದ್ದಾರೆ.