ಉಪ್ಪುಂದ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ವಿದ್ಯಾರ್ಥಿಯೋರ್ವ ಮನನೊಂದು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್ ಸೇತುವೆ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಯುವಕನ ಮೃತ ದೇಹ ನಾವುಂದ ಕಡಲ ತೀರದಲ್ಲಿ ಪತ್ತೆಯಾಗಿದೆ. ಬೈಂದೂರು ಪೋಲಿಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ವಿದ್ಯಾರ್ಥಿಯೋರ್ವ ಮನನೊಂದು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್ ಸೇತುವೆ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿತ್ತು.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಕುಂದಾಪುರದ ವಡೇರ ಹೋಬಳಿ ಜೆ.ಎಲ್.ಬಿ. ರಸ್ತೆ ನಿವಾಸಿ ರಘುವೀರ್ ಶೆಟ್ಟಿ ಎಂಬುವರ ಮಗ ಸಾಯಿಷ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಸಾಯಿಷ್ ಶೆಟ್ಟಿ ಶಿವಮೊಗ್ಗದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ನಿರೀಕ್ಷೆ ಹೊಂದಿದ್ದ ಆದರೆ ಫಲಿತಾಂಶದಲ್ಲಿ ತೀರಾ ಕಡಿಮೆ ಅಂಕ ಬಂದಿರುವುದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಮಧ್ಯಾಹ್ನದ ವೇಳೆಗೆ ಸೈಕಲ್ಲಿನಲ್ಲಿ ಸೇತುವೆ ಬಳಿ ಬಂದ ಸಾಯಿಷ್ ಶೆಟ್ಟಿ ಸೈಕಲ್ ಹಾಗೂ ಮೊಬೈಲನ್ನು ಸೇತುವೆ ಬದಿಯಲ್ಲಿ ಇಡುತ್ತಿದ್ದಾಗ ಸ್ಥಳೀಯರು ಕೆಲವರು ನೋಡಿದ್ದಾರೆ. ನೋಡ ನೋಡುತ್ತಿದ್ದಂತೆ ನದಿಗೆ ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.