- Advertisement -
- Advertisement -
ಗಣೇಶನ ವಿಸರ್ಜನೆ ಮಾಡುವಾಗ ನೀರಿನಲ್ಲಿ ಮುಳುಗಿ ತಂದೆ, ಮಗ ಹಾಗೂ ಓರ್ವ ಯುವಕ ಸಾವನ್ನಪ್ಪಿದ ಘಟನೆ ತುಮಕೂರು ತುರುವೇಕೆರೆ ತಾಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ನಡೆದಿದೆ.
ಗ್ರಾಮದ ರೇವಣ್ಣ (ತಂದೆ), ಇವರ ಮಗ ಶರತ್ ಹಾಗೂ ದಯಾನಂದ್ ಎನ್ನುವ ಯುವಕ ಮೃತಪಟ್ಟಿದ್ದಾರೆ. ಗಣೇಶ ಉತ್ಸವವನ್ನು ಸಂಭ್ರಮದಿಂದ ನೆರವೇರಿಸಿ, ಬಳಿಕ ಮೆರವಣಿಗೆ ಮಾಡಿದ ನಂತರ ಗಣೇಶನನ್ನು ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡುವ ವೇಳೆ ಕೆರೆಯ ನೀರಿನಲ್ಲಿ ಮುಳುಗಿ ತಂದೆ, ಮಗ ಹಾಗೂ ಯುವಕ ಸಾವನ್ನಪ್ಪಿದ್ದಾರೆ.
ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡುವಾಗ ಈ ದುರ್ಘಟನೆ ನಡೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಟಿ, ಪರಿಶೀಲನೆ ನಡೆಸಿದ್ದಾರೆ
- Advertisement -