Sunday, July 6, 2025
spot_imgspot_img
spot_imgspot_img

ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸೇರಿದ ಅಯೋಧ್ಯೆಯ ದೀಪೋತ್ಸವ; ಸರಯು ನದಿಗೆ ಪ್ರಧಾನಿ ಮೋದಿ ಆರತಿ

- Advertisement -
- Advertisement -

ಈ ಬಾರಿ ಅಯೋಧ್ಯೆಯಲ್ಲಿ 15 ಲಕ್ಷಹಣತೆಗಳನ್ನು 30 ನಿಮಿಷ ಬೆಳಗಿಸುವ ಮೂಲಕ ದೀಪೋತ್ಸವವು ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸೇರಿದೆ.

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ 14 ವರ್ಷದ ವನವಾಸ ಮುಗಿಸಿ ವಾಪಾಸ್ ಬಂದ ನಂತರ ಜನರು ಇಡೀ ಅಯೋಧ್ಯೆಯನ್ನು ದೀಪಗಳಿಂದ ಅಲಂಕರಿಸಿ, ಸಂಭ್ರಮಿಸಿದ್ದರು. ಈ ಹಿನ್ನೆಲೆ ಅಯೋಧ್ಯೆಯ ದೀಪಾವಳಿ ಬಹಳ ಪ್ರಸಿದ್ಧಿ ಪಡೆದಿದೆ.

3 ಲಕ್ಷ ದೀಪಗಳು ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಪ್ರಜ್ವಲಿಸಲಿಸಿವೆ. ನದಿ ದಡದಲ್ಲಿನ ಪ್ರತಿ ಚೌಕದಲ್ಲಿ 256 ದೀಪಗಳನ್ನು ಇಡಲಾಗಿದೆ. ನದಿ ತಟದಲ್ಲಿ ಲೇಸರ್‌ ಶೋ, 3ಡಿ ಪ್ರೊಜೆಕ್ಷನ್‌ ಮ್ಯಾಪಿಂಗ್‌ ಶೋ, ಪಟಾಕಿ ಪ್ರದರ್ಶನಗಳು ನಡೆದವು.

ಅಯೋಧ್ಯೆಯ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲು ಇಂದು ಸಂಜೆ ಉತ್ತರ ಪ್ರದೇಶದ ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು.

ಪ್ರಧಾನಿ ನರೇಂದ್ರ ಮೋದಿ ಸಾಗುವ ಮಾರ್ಗ ಉದ್ದಕ್ಕೂ ಕಿಕ್ಕಿರಿದು ಸೇರಿದ್ದ ಜನರು ಹೂ ಹಾಕುವ ಮೂಲಕ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಪ್ರಭು ಶ್ರೀಮಚಂದ್ರನಿಗೆ ಪ್ರಾರ್ಥನೆ ಸಲ್ಲಿಸಿದರು.

ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮನ ಸಾಂಕೇತಿಕ ಪಟ್ಟಾಭಿಷೇಕವನ್ನು ಮಾಡಿದರು. ನಂತರ ಅವರು ಸರಯು ನದಿಯ ದಡದಲ್ಲಿ ಆರತಿಯಲ್ಲಿ ಪಾಲ್ಗೊಂಡರು.

ಸರಯು ನದಿಯ ಆರತಿ 8 ಮಂದಿ ವೈದಿಕ ಬ್ರಾಹ್ಮಣರ ನೇತೃತ್ವದಲ್ಲಿ ಪ್ರಧಾನಿ ಸರಯು ಪೂಜೆ ಮಾಡಿದ್ದಾರೆ. ಸಂಜೆ 6:25ಕ್ಕೆ ಪ್ರಧಾನಿಯವರು 5100 ದೀಪಗಳ ವಿಶೇಷ ಆರತಿಯೊಂದಿಗೆ ಪ್ರಧಾನಿ ಮಾತಾ ಸರಯುವಿನ ಆರತಿಯನ್ನು ನೆರವೇರಿಸಿದರು.

- Advertisement -

Related news

error: Content is protected !!