Tuesday, July 1, 2025
spot_imgspot_img
spot_imgspot_img

ಜಿಲ್ಲೆಗೊಂದು ಗೋಶಾಲೆ ಘೋಷಣೆ: ಸಂತಸ ವ್ಯಕ್ತಪಡಿಸಿದ ವಿಶ್ವಪ್ರಸನ್ನ ಶ್ರೀ

- Advertisement -
- Advertisement -

ಉಡುಪಿ: ಬಜೆಟ್‌ನಲ್ಲಿ ಜಿಲ್ಲೆಗೊಂದು ಗೋಶಾಲೆ ಘೋಷಣೆ ಆಗಿರುವುದು ಸಂತಸವಾಗಿದೆ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಲು ಇದು ಅನುಕೂಲ. ವಿಶ್ವೇಶ ತೀರ್ಥ ಸ್ವಾಮೀಜಿ ನೆನಪಲ್ಲಿ ವನ ಘೋಷಣೆಯಾಗಿದೆ. ಇದು ನಮಗೆ ಬಹಳ ಸಂತಸ ತಂದಿದೆ. ಅಯೋಧ್ಯೆಯಲ್ಲಿ ಕರ್ನಾಟಕ ಭವನಕ್ಕೆ 10 ಕೋಟಿ ಅನುದಾನ ನೀಡಲಾಗಿದೆ.

ಕರ್ನಾಟಕದ ಯಾತ್ರಿಕರಿಗೆ ಭವನದಿಂದ ಬಹಳ ಉಪಯೋಗವಾಗಲಿದೆ. ಬಜೆಟ್​ನಲ್ಲಿ ಘೋಷಣೆ ಆಗಿದ್ದೆಲ್ಲಾ ಕಾರ್ಯಗತವಾಗಲಿ. ಶ್ರೀಕೃಷ್ಣ ಮುಖ್ಯಪ್ರಾಣನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!