ಜೈಲಿನಲ್ಲಿದ್ದ ಖೈದಿಗಳಿಗೆ ಗಾಂಜಾ ಪೂರೈಸಲು ಮುಂದಾದ ಖತರ್ನಾಕ್ ಯುವತಿಯರು ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಬಂದ ಯುವತಿ..!
ಚಾಮರಾಜಪೇಟೆಯ ಸಂಗೀತಾ ಎಂಬಾಕೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ತನ್ನ ಗೆಳೆಯ ಲೋಹಿತ್ ಗೆ ಗಾಂಜಾ ನೀಡಲು ಗುಪ್ತಾಂಗದಲ್ಲಿ 220 ಗ್ರಾಂ ಅಶಿಶ್ ಎಣ್ಣೆ ಪ್ಯಾಕೆಟ್ ಅನ್ನು ಇಟ್ಟುಕೊಂಡು ಬಂದಿದ್ದಳು. ಸಂದರ್ಶನದ ನೆಪದಲ್ಲಿ ಬಂದ ಆಕೆಯ ನಡಿಗೆ ಕುರಿತು ಅನುಮಾನಗೊಂಡ ಜೈಲಿನ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಮಹಿಳಾ ಪೊಲೀಸರ ಮೂಲಕ ತಪಾಸಣೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ.
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಛಾಯಾ ಎಂಬಾಕೆ ಜೈಲಿನಲ್ಲಿದ್ದ ಕಾಳಪ್ಪ ಎಂಬಾತನ ಭೇಟಿಗೆ ಬಂದಿದ್ದು, ತನ್ನ ಗುಪ್ತಾಂಗದಲ್ಲಿ 50 ml ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಅಶಿಶ್ ಆಯಿಲ್ ತುಂಬಿ ಗೆಳೆಯನಿಗೆ ಕೊಡಲು ಮುಂದಾಗಿದ್ದಳು. ಈಕೆ ಕೂಡ ಈಗ ಸಿಕ್ಕಿಬಿದ್ದಿದ್ದಾಳೆ.