Friday, June 27, 2025
spot_imgspot_img
spot_imgspot_img

ಡ್ರೈವಿಂಗ್‌ ಕಲಿಯಲು ಕಾರು ತೆಗೆದುಕೊಂಡು ಹೋದ ಅಪ್ಪ-ಮಗ ಬಾವಿಗೆ ಬಿದ್ದು ದಾರುಣ ಸಾವು

- Advertisement -
- Advertisement -

ಕಣ್ಣೂರು : ಡ್ರೈವಿಂಗ್ ಕಲಿಯಲು ಮನೆಯಿಂದ ಕಾರು ತಗೊಂಡು ಹೋಗಿದ್ದ ತಂದೆ-ಮಗ ಕಾರು ಸಮೇತ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಕಣ್ಣೂರಿನ ಅಳಕೋಡ್ ನೆಲ್ಲಿಕುಂಮ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ತಂದೆ ಮಾತುಕುಟ್ಟಿ ಸ್ಥಳದಲ್ಲೇ ಮೃತಪಟ್ಟರೆ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿನ್ಸಿ (18) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸಿದಾಗ ಚಾಲನೆ ಕಲಿಯಲು ವಿನ್ಸಿ ತನ್ನ ಕಾರನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತಿದ್ದನು. ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ತಳಿಪರಂನಿಂದ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಇಬ್ಬರನ್ನೂ ಹೊರತೆಗೆದಿದ್ದಾರೆ.

vtv vitla
- Advertisement -

Related news

error: Content is protected !!