- Advertisement -
- Advertisement -

ವಿಜಯಪುರ: ತೋಟದಲ್ಲಿ ಪಂಪ್ಸೆಟ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶದಿಂದ ಬಾವಿಗೆ ಬಿದ್ದು ಅಣ್ಣ-ತಮ್ಮ ಮೃತಪಟ್ಟ ಘಟನೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಬಳಿ ನಡೆದಿದೆ.

ಬಸವರಾಜ ಪಾಟೀಲ್(24) ಮತ್ತು ಶಿವರಾಜ ಪಾಟೀಲ್(20) ಮೃತರು. ನೀರೆತ್ತುವ ಪಂಪ್ ಸೆಟ್ನಿಂದ ವಿದ್ಯುತ್ ತಗುಲಿ ಬಾವಿಯಲ್ಲಿ ಬಿದ್ದು ಅಣ್ಣ ತಮ್ಮ ಮೃತಪಟ್ಟಿದ್ದಾರೆ.
ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -








