Tuesday, July 1, 2025
spot_imgspot_img
spot_imgspot_img

ದಶಕದ ಹಿಂದೆ ಆಧಾರ್ ಪಡೆದವರು ವಿವರ ನವೀಕರಿಸಲು ಸೂಚನೆ

- Advertisement -
- Advertisement -

ನವದೆಹಲಿ: 10 ವರ್ಷಗಳ ಹಿಂದೆ ಆಧಾರ ಪಡೆದು, ಅಂದಿನಿಂದ ತಮ್ಮ ವಿವರಗಳನ್ನು ನವೀಕರಿಸದ ಆಧಾರ್ ಹೊಂದಿರುವವರು ತಮ್ಮ ಗುರುತು ಮತ್ತು ನಿವಾಸ ಪುರಾವೆ ದಾಖಲೆಗಳನ್ನು ನವೀಕರಿಸಲು ದಾಖಲಾತಿಗಳನ್ನು ಸಲ್ಲಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ತಿಳಿಸಿದೆ.

ಈ ಬಗ್ಗೆ ಯುಐಡಿಎಐ, ಪ್ರಕಟಣೆ ಹೊರಡಿಸಿದ್ದು, ಆನ್‌ಲೈನ್ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಹಿತಿ ಅಪ್‌ಡೇಟ್ ಮಾಡಬಹುದಾಗಿದೆ ಎಂದು ತಿಳಿಸಿದೆ.

ಅದರೂ , ಈ ನವೀಕರಣವು ಕಡ್ಡಾಯವಾಗಿದೆಯೇ ಎಂಬ ಬಗ್ಗೆ ಪ್ರಾಧಿಕಾರ ಸ್ಪಷ್ಟನೆ ನೀಡಿಲ್ಲ ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗುರುತಿನ ದಾಖಲೆಗಳು ಮತ್ತು ಮನೆಯ ವಿಳಾಸದ ಮಾಹಿತಿ ನವೀಕರಣ ಮಾಡಬಹುದಾಗಿದೆ ಎಂದು ಅದು ಹೇಳಿದೆ.

My Aadhaar ಪೋರ್ಟಲ್‌ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾಹಿತಿ ನವೀಕರಿಸಬಹುದು’ಆಧಾರ್ ಕಾರ್ಡ್‌ನಲ್ಲಿ ಐರಿಸ್, ಫಿಂಗರ್‌ಪ್ರಿಂಟ್ ಮತ್ತು ಛಾಯಾಚಿತ್ರಗಳ ಮೂಲಕ ಗುರುತಿಸುವಿಕೆಯನ್ನು ದಾಖಲು ಮಾಡಲಾಗುತ್ತದೆ. ಕಳೆದ 10 ವರ್ಷಗಳಿಂದ ದೇಶದಲ್ಲಿ ಆಧಾರ್ ಸಂಖ್ಯೆಯು ವ್ಯಕ್ತಿಗಳ ಪ್ರಮುಖ ಗುರುತಿನ ಮೂಲವಾಗಿ ಹೊರಹೊಮ್ಮಿದೆ ಎಂದು ಹೇಳಿಕೆ ತಿಳಿಸಿದೆ. ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳಲ್ಲಿ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತದೆ.

- Advertisement -

Related news

error: Content is protected !!