Saturday, June 28, 2025
spot_imgspot_img
spot_imgspot_img

ದೂರು ಕೊಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಇನ್ಸ್‌ಪೆಕ್ಟರ್‌ ಸಸ್ಪೆಂಡ್

- Advertisement -
- Advertisement -

ಠಾಣೆಗೆ ದೂರು ಕೊಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಇನ್ಸ್‌ಪೆಕ್ಟರ್‌‌ನನ್ನು ಸಸ್ಪೆಂಡ್ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜಣ್ಣ ಎಂಬಾತ ದೂರು ನೀಡಲು ಬಂದ ಮಹಿಳೆಯ ನಂಬರ್ ಪಡೆದು ಆಕೆಯೊಂದಿಗೆ ಅಸಭ್ಯವಾಗಿ ಚಾಟಿಂಗ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಕೆಯನ್ನು ರೂಂಗೆ ಬರಲು ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

ಇದರಿಂದ ನೊಂದ ಮಹಿಳೆ ಅಸಭ್ಯವಾಗಿ ವರ್ತಿಸಿದ ಇನ್ಸ್‌ಪೆಕ್ಟರ್ ಮೇಲೆ ಸಾಕ್ಷಿ ಸಮೇತ ದೂರು ನೀಡಿದ್ದಾರೆ. ರಾಜಣ್ಣ ಕುರಿತಾಗಿ ಡಿಸಿಪಿಗೆ ದೂರು ನೀಡಿದ್ದಾಳೆ. ಮಹಿಳೆ ದೂರು ಆಧರಿಸಿ ಡಿಸಿಪಿ ಲಕ್ಷ್ಮೀ ಪ್ರಸಾದ್ ಪ್ರಾಥಮಿಕ ತನಿಖೆ ನಡೆಸಲು ಹೇಳಿದ್ದರು. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಇನ್ಸ್‌ಪೆಕ್ಟರ್ ರಾಜಣ್ಣ ಎಂಬಾತನನ್ನು ಸಸ್ಪೆಂಡ್‌ ಮಾಡಲಾಗಿದೆ. FIR ಕೂಡಾ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!