Friday, August 19, 2022
spot_imgspot_img
spot_imgspot_img

ಧನ್ವಿ ರೈ ಪಾಣಾಜೆ, ವಿಂಧ್ಯಾ ಎಸ್.ರೈ ಸೇರಿದಂತೆ ವಿವಿಧ ಸಾಧಕರಿಗೆ ರಾಜ್ಯ ಪ್ರಶಸ್ತಿ

- Advertisement -G L Acharya G L Acharya
- Advertisement -

ಪುತ್ತೂರು : ಸುಳ್ಯ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯ ದೇವಮ್ಮ ಕಾಂಪ್ಲೆಕ್ಸ್‌ನಲ್ಲಿ ಭೀಮರಾವ್ ವಾಷ್ಠರ್ ಸುಳ್ಯರವರ ಸಂಯೋಜನೆಯಲ್ಲಿ ನಡೆದ ಸಾಹಿತ್ಯ ಸಂಭ್ರಮ-2022ದಲ್ಲಿ ವಿವಿಧ ಸಾಧಕರಿಗೆ ಚಂದನ ಕಲಾ ಪ್ರತಿಭೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಧನ್ವಿ ರೈ ಪಾಣಾಜೆ, ವಿಂಧ್ಯಾ ಎಸ್.ರೈ, ನಾರಾಯಣ ನಾಯ್ಕ ಕುದುಕೋಳಿ, ಗೋಪಾಲ್ ಈಶ್ವರಡ್ಕ KSRTC ಇವರಿಗೆ ಚಂದನ ಕಲಾ ಪ್ರತಿಭೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಾಣಾಜೆ ವಿವೇಕ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾದ ಧನ್ವಿ ರೈ ಪಾಣಾಜೆ ಚಂದನ ಕಲಾ ಪ್ರತಿಭೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದು, ಇವರು ಕೋಟೆ ರವಿಶಂಕರ್ ರೈ ಮತ್ತು ವಿಜಯ ರೈ ದಂಪತಿ ಪುತ್ರಿಯಾಗಿದ್ದಾರೆ. ಧನ್ವಿ ರೈ ಇವರ ಈ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!