Tuesday, July 1, 2025
spot_imgspot_img
spot_imgspot_img

ನೂತನ ಹಸಿರು ಮಾರ್ಗಕ್ಕೆ ಚಾಲನೆ

- Advertisement -
- Advertisement -

ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಸಿಹಿ ಸುದ್ದಿ ಕೊಟ್ಟಿದೆ. ಮೆಟ್ರೋ ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿಯಿಂದ ಸಿಲ್ಕ್​​ ಇನ್ಸ್​​ಟಿಟ್ಯೂಟ್​​ವರೆಗಿನ 6 ಕಿ.ಲೋ ಮೀಟರ್ ಉದ್ದದ ನೂತನ ಮಾರ್ಗ ಸೇರ್ಪಡೆಯಾಗಲಿದೆ. ನೂತನ ಹಸಿರು ಮಾರ್ಗಕ್ಕೆ ಇಂದು ಸಂಜೆ ಸಿಎಂ ಬಿಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಲಿದ್ದಾರೆ.

ನೂತನ ಹಸಿರು ಮಾರ್ಗ ಕೋಣನಕುಂಟೆ ಕ್ರಾಸ್, ದೊಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ಸೇರಿ ಒಟ್ಟು 5 ಎಲಿವೇಟೆಡ್‌ ಮೆಟ್ರೋ ನಿಲ್ದಾಣವನ್ನು ಹೊಂದಿವೆ. ಜನವರಿ 15ರಿಂದ ರೈಲು ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ.

- Advertisement -

Related news

error: Content is protected !!