Friday, June 12, 2026
spot_imgspot_img
spot_imgspot_img

ನೇರಳೆ ಹಣ್ಣಿನ ಉಪಯುಕ್ತ ಗುಣಗಳು

- Advertisement -
- Advertisement -

ಇಂಗ್ಲಿಷ್‌ನಲ್ಲಿ ಜಾವಾ ಪ್ಲಮ್ ಅಥವಾ ಇಂಡಿಯನ್ ಬ್ಲ್ಯಾಕ್‌ಬೆರಿ ಎಂದೂ ಇದನ್ನು ಕರೆಯಲಾಗುತ್ತದೆ.

ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ನಮ್ಮ ದೇಹ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ನೇರಳೆ ಮರದ ಬಹುತೇಕ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿವೆ. ಬೀಜ ಮತ್ತು ಹಣ್ಣುಗಳೆರಡೂ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಮಧುಮೇಹ ರೋಗಿಗಳಿಗೆ ಉತ್ತಮ ಔಷಧಿ ಎನ್ನಬಹುದು.

ಆಯುರ್ವೇದ, ಯುನಾನಿ ಮತ್ತು ಚೈನೀಸ್ ಔಷಧಗಳಂತಹ ಸಮಗ್ರ ಚಿಕಿತ್ಸೆಗಳಲ್ಲಿ ಮಹತ್ತರ ಪ್ರಾಮುಖ್ಯತೆಯನ್ನು ನೇರಳೆಹಣ್ಣು ಹೊಂದಿದೆ. ಇದು ಕಫ ಮತ್ತು ಪಿತ್ತವನ್ನು ದುರ್ಬಲಗೊಳಿಸುತ್ತದೆ. ಹೃದಯ, ಸಂಧಿವಾತ, ಅಸ್ತಮಾ, ಹೊಟ್ಟೆ ನೋವು, ಕರುಳಿನ ಸೆಳೆತ, ವಾಯು ಮತ್ತು ಭೇದಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ಈ ಹಣ್ಣು ಶಿಫಾರಸು ಮಾಡಲಾಗುತ್ತದೆ

- Advertisement -

Related news

error: Content is protected !!