Monday, July 4, 2022
spot_imgspot_img
spot_imgspot_img

ಪತ್ನಿಯ ನೆನಪಿಗಾಗಿ ಮೂರ್ತಿ ಸ್ಥಾಪನೆ; ನಿತ್ಯವೂ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಪತಿ

- Advertisement -
- Advertisement -

ಬೆಳಗಾವಿ: ಪ್ರೀತಿಗಾಗಿ, ಪ್ರೀತಿಸಿದವರ ನೆನಪಿಗಾಗಿ ತಾಜಮಲ್ ಕಟ್ಟಿಸಿದ್ದನ್ನು ಕೇಳಿದ್ದೇವೆ. ಇದೇ ರೀತಿ ಇಲ್ಲೊಬ್ಬ ಪತಿ ತನ್ನ ಪತ್ನಿ ಸಾವನ್ನಪ್ಪಿದ್ದನ್ನು ಮರೆಯಲು ಸಾಧ್ಯವಾಗದೆ ಹೆಂಡತಿಯ ಮೂರ್ತಿಯನ್ನೇ ಸ್ಥಾಪಿಸಿದ್ದಾರೆ.

ಮೈನುಬಾಯಿ ಚೌಗಲೆ ಎಂಬ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶಿವಾ ಚೌಗಲೆ ಮತ್ತು ಮೈನುಬಾಯಿ ಮೂವತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಹನ್ನೆರಡು ವರ್ಷದ ಬಳಿಕ ಈ ದಂಪತಿಗೆ ಮಗಳು ಜನಿಸುತ್ತಾಳೆ. ಇನ್ನೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಂದು ಬಾರಿಗೆ ಮೈನುಬಾಯಿ ಸದಸ್ಯೆ ಕೂಡ ಆಗಿದ್ದರು.

ಇತ್ತ ಹೆಂಡತಿಯ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾ ಜೀವನ ಕಂಡುಕೊಂಡಿದ್ದ ಶಿವಾ ಚೌಗಲೆ ಕೂಡ ಒಂದು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಇಬ್ಬರು ಸಮಾಜ ಸೇವೆ ಮಾಡುತ್ತಾ ಒಬ್ಬರಿಗೊಬ್ಬರು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾ ಜೀವನ ನಡೆಸುತ್ತಿದ್ದರು. ಆದರೆ ಮಹಾಮಾರಿ ಕೊರೊನಾ ಶಿವಾ ಚೌಗಲೆ ಅವರ ಹೆಂಡತಿ ಮೈನುಬಾಯಿ ಅನಾರೋಗ್ಯಕ್ಕಿಡಾಗುವಂತೆ ಮಾಡುತ್ತದೆ.

ಇದಾದ ಬಳಿಕ ಆಕೆ ಗುಣಮುಖ ಆಗುವುದೇ ಇಲ್ಲ ಹೀಗೆ ಮೇ.11ರಂದು ಮೈನುಬಾಯಿ ಕೊನೆಯುಸಿರೆಳೆಯುತ್ತಾರೆ. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಹೆಂಡತಿಯನ್ನು ಮರೆಯಲು ಆಗದೆ ಇದ್ದಾಗ ಹೊಳೆದಿದ್ದೇ ಮನೆಯಲ್ಲಿ ಆಕೆಯ ಮೂರ್ತಿ ಪ್ರತಿಷ್ಠಾಪಿಸುವ ಯೋಚನೆ. ಅದರಂತೆ ಇದೀಗ ಹೆಂಡತಿ ಮೈನುಬಾಯಿ ಮೂರ್ತಿಯನ್ನು ಸ್ಥಾಪಿಸಿ ತನ್ನೊಂದಿಗೆ ಪತ್ನಿ ಇದ್ದಾಳೆ ಎನ್ನುವಂತೆ ಮತ್ತೆ ಜೀವನ ಶುರು ಮಾಡಿದ್ದಾರೆ ಶಿವಾ ಚೌಗಲೆ.

ಇನ್ನೂ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಶಿವಾ ಚೌಗಲೆ ಜೋತಿಷಿಗಳ ಮೊರೆ ಹೋಗಿದ್ದು, ಅವರೊಂದಿಗೆ ಚರ್ಚಿಸಿದ ಬಳಿಕ ಮೈನುಬಾಯಿ ಪ್ರತಿರೂಪದ ಮೂರ್ತಿಗೆ ಆರ್ಡರ್ ಕೊಟ್ಟು 45ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮಟಿರಿಯಲ್​ನಿಂದ ಮೂರ್ತಿ ಸಿದ್ಧ ಮಾಡಿ ತಂದಿದ್ದಾರೆ.

ದೀಪಾವಳಿ ದಿನದಂದು ಅದ್ದೂರಿ ಮೆರವಣಿಗೆ ಮಾಡಿ ಕುಟುಂಬಸ್ಥರನ್ನು ಕರೆಸಿ ಊಟ ಹಾಕಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಹೆಂಡತಿ ಮೂರ್ತಿಯಲ್ಲಿ ಮೈನುಬಾಯಿ ಧರಿಸುತ್ತಿದ್ದ ಚಿನ್ನದ ಒಡೆವೆಗಳಾದ ಪಾಟ್ಲಿ, ಚಿನ್ನದ ಸರ, ಬಳೆ, ಕಿವಿವೊಲೆ, ಮೂಗಿನ ನತ್ತು ಸೇರಿದಂತೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಹಾಕಲಾಗಿದೆ.

ಸದ್ಯ ಹೆಂಡತಿ ಮೂರ್ತಿಗೆ ನಿತ್ಯವೂ ಪೂಜೆ ಮಾಡುತ್ತಾ ಆರಾಧಿಸುತ್ತಾ ಶಿವಾ ಚೌಗಲೆ ಕಾಲ ಕಳೆಯುತ್ತಿದ್ದಾರೆ ಎಂದು ಶಿವಾ ಚೌಗಲೆ ಸಂಬಂಧಿ ನಾಗವ್ವಾ ತಿಳಿಸಿದ್ದಾರೆ.

ಹೆಂಡತಿ ಮೃತಪಟ್ಟಳು ಅಂದರೆ ಬೇರೊಂದು ಮದುವೆಯಾಗಿ ಆಕೆಯನ್ನು ಮರೆತು ಜೀವನ ನಡೆಸುವ ಅದೆಷ್ಟೋ ಗಂಡಂದಿರ ನಡುವೆ, ಈ ಶಿವಾ ಚೌಗಲೆ ವಿಭಿನ್ನವಾಗಿದ್ದು, ಹೆಂಡತಿ ಮೂರ್ತಿ ಸ್ಥಾಪಿಸುವುದರ ಜತೆಗೆ ಅದಕ್ಕೆ ಪೂಜೆ ಮಾಡುತ್ತಾ ಹೆಂಡತಿಯನ್ನು ಆರಾಧಿಸುತ್ತಿರುವುದು ನಿಜಕ್ಕೂ ವಿಶೇಷ ಎನಿಸುತ್ತದೆ.

- Advertisement -

Related news

error: Content is protected !!