Sunday, January 16, 2022
spot_imgspot_img
spot_imgspot_img

ಪುತ್ತೂರು: ಕೋಮು ಪ್ರಚೋದನಾಕಾರಿ ಭಾಷಣದ ಆರೋಪ; SDPI, CFI ಸಂಘಟಕರ ವಿರುದ್ಧ ಪ್ರಕರಣ ದಾಖಲು.!

- Advertisement -
- Advertisement -

vtv vitla

ಪುತ್ತೂರು: ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪದ ಮೇರೆಗೆ ಎಸ್.ಡಿ.ಪಿ.ಐ. ಮತ್ತು ಸಿ.ಎಫ್.ಐ. ಸಂಘಟಕರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla

ಪುಷ್ಪರಾಜ್ ಆಚಾರ್ಯ ಎಂಬವರು ನೀಡಿದ ದೂರಿನ ಮೇರೆಗೆ ಮಹಮ್ಮದ್ ಜಾಬೀರ್, ಸಾವದ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. 2 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಭಾರತೀಯ ಸೈನಿಕರನ್ನು ಅಪಮಾನಿಸಿ, ದೇಶದ್ರೋಹಿ ಹೇಳಿಕೆ ನೀಡಿದ ಕುಖ್ಯಾತಿ ಹೊಂದಿದ ಜಾಬೀರ್ ಅರಿಯಡ್ಕ ಎನ್ನಲಾಗಿದೆ.

ಇದನ್ನೂ ಓದಿ: ಪುತ್ತೂರು: ಪ್ರಚೋದನಕಾರಿ ಭಾಷಣದ ಆರೋಪ; ಅರುಣ್ ಕುಮಾರ್ ಪುತ್ತಿಲ ವಿರುದ್ಧ FIR ದಾಖಲು

ಕೋಮು ಭಾವನೆ ಕೆರಳಿಸಿ ವಿದ್ಯಾರ್ಥಿಗಳ ನಡುವೆ ಗಲಭೆ ನಡೆಸಲು ಉತ್ತೇಜನ ಹಾಗೂ ಸಾಮಾಜಿಕ ಸ್ವಾಸ್ಥ್ಯ ನಾಶ ಮಾಡಿ ಧರ್ಮದ ಆಧಾರದಲ್ಲಿ ಶಾಲಾ ಕಾಲೇಜುಗಳಲ್ಲಿ ಗಲಭೆ ನಡೆಸಲು ಪುಚೋದನೆ ನಡೆಸುವಂತೆ ಭಾಷಣ ಮಾಡಿರುವುದು ಅಲ್ಲದೆ ಹಿಂದೂ ಮುಖಂಡರ ವಿರುದ್ಧ ಕೀಳು ಮಟ್ಟದ ಶಬ್ದಗಳಲ್ಲಿ ಮಾತನಾಡಿರುವುದಾಗಿ ಮತ್ತು ಕಾಲೇಜಿನ ಒಳಗಡೆ ಅಕ್ರಮ ಪ್ರವೇಶ ಮಾಡಿ ಅಲ್ಲಿನ ವಿದ್ಯಾರ್ಥಿಗಳ ನಡುವೆ ಗಲಭೆ ನಡೆಸಲು ಹುನ್ನಾರ ನಡೆಸಿರುತ್ತಾರೆ ಎಂದು ಆರೋಪಿಸಲಾಗಿದೆ.

vtv vitla
- Advertisement -

Related news

error: Content is protected !!