- Advertisement -



- Advertisement -
ಪುತ್ತೂರು: ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಕಾರು ಬಾಲಕಿಗೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ನಡೆದಿದೆ.
ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಸಹಿತ ಕಾರ್ಯಕರ್ತರು ಜಿಡೆಕಲ್ಲು ಕಡೆಯಿಂದ ಚುನಾವಣಾ ಪ್ರಚಾರ ನಡೆಸಿ ಬರುತ್ತಿದ್ದ ವೇಳೆ ಕೆರೆಮೂಲೆ ಸಮೀಪ ಮೂರು ಕಾರುಗಳ ಪೈಕಿ ಮೊದಲ ಕಾರು ರಸ್ತೆ ದಾಟುತ್ತಿದ್ದ ಆಯಿಷಾ ಶೈಮಾ ಎಂಬ ಐದು ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಗಾಯಗೊಂಡ ಬಾಲಕಿ ಆಯಿಷಾಳನ್ನು ಅದೇ ಕಾರಿನಲ್ಲಿ ಕರೆ ತಂದು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಬಾಲಕಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ನಡೆದಿದೆ ಎಂದು ವರದಿಯಾಗಿದೆ.
- Advertisement -