Saturday, June 28, 2025
spot_imgspot_img
spot_imgspot_img

ಪುತ್ತೂರು: ಬೆಲೆಬಾಳುವ ಒಡವೆಗಳನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.!

- Advertisement -
- Advertisement -

ಪುತ್ತೂರು: ಆಟೋ ರಿಕ್ಷಾದಲ್ಲಿ ಸಿಕ್ಕಿದ ಬೆಲೆಬಾಳುವ ಒಡವೆಗಳನ್ನು ಮರಳಿ ನೀಡುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

ದಿನಾಂಕ 15-05-2022 ರಂದು ಆಟೋ ರಿಕ್ಷಾದಲ್ಲಿ ಬೆಲೆಬಾಳುವ ಒಡವೆಗಳು ಸಿಕ್ಕಿದ್ದು, ಯಾರದ್ದು ಎಂದು ತಿಳಿಯದ ಆಟೋ ಚಾಲಕ ವಸಂತ ಕಂಬಳಬೆಟ್ಟು ಅವರು ಪುತ್ತೂರು ಠಾಣೆಗೆ ಮಾಹಿತಿ ನೀಡಿದ್ದರು. ಸದ್ಯ ವಾರಿಸಿದಾರರು ಗುರುತು ಹೇಳಿ ಒಡವೆಗಳನ್ನು ಪಡೆದುಕೊಂಡಿರುತ್ತಾರೆ. ಆಟೋ ಡ್ರೈವರ್ ವಸಂತ ಕಂಬಳಬೆಟ್ಟು ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಾರ್ವಜನಿಕರಿಂದಲೂ ಸಹ ಶ್ಲಾಘನೆ ವ್ಯಕ್ತವಾಗುತ್ತಿದೆ.

- Advertisement -

Related news

error: Content is protected !!