Thursday, July 29, 2021
spot_imgspot_img
spot_imgspot_img

ಪುತ್ತೂರು: ಸಾಯಿಬಾಬನ ಪವಾಡ ಎಂಬ ಶಿರೋನಾಮೆಯಲ್ಲಿ ಕೆಎಸ್ಆರ್ ಟಿಸಿ ಘಟಕದ ಕುರಿತು ವಾಟ್ಸಾಪ್ ನಲ್ಲಿ ಅವಹೇಳನಕಾರಿ ಸಂದೇಶ ರವಾನೆ; ಪ್ರಕರಣ ದಾಖಲು!

- Advertisement -
- Advertisement -

ಪುತ್ತೂರು: ಸಾಯಿಬಾಬನ ಪವಾಡ ಎಂಬ ಶಿರೋನಾಮೆಗಳಲ್ಲಿ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ಮತ್ತು ಘಟಕಕ್ಕೆ ಸಂಬಂಧಿಸಿದಂತೆ ನಿಂದನಾಕಾರಿ, ಮಾನಹಾನಿಕರ, ನಿಗಮದ ಗೌರವಕ್ಕೆ ಧಕ್ಕೆ ತರುವಂತಹ ಹಾಗೂ ಸಮಾಜದ ಸ್ವಾಸ್ತ್ಯ ಕೆಡಿಸುವ ಸಂದೇಶಗಳು ವಾಟ್ಸಪ್‌ನಲ್ಲಿ ರವಾನೆಯಾದ ಕುರಿತು ಕೆಎಸ್ಸಾರ್ಟಿಸಿ ಪುತ್ತೂರು ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಅವರು ನ್ಯಾಯಾಲಯದ ಮೂಲಕ ಖಾಸಗಿಯಾಗಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎರ್ಸ್ಸಾಟಿಸಿ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಅವರು ದೂರುದಾರರಾಗಿದ್ದು, ವಾಟ್ಸಪ್‌ನಲ್ಲಿ ಘಟಕದಲ್ಲಿ ತಾಂತ್ರಿಕ ಸಿಬ್ಬಂದಿಯ ಹಾಜರಾತಿಯಲ್ಲಿ ಗೋಲ್ಮಾಲ್, ಪಾರು ಪತ್ತೇಗಾರನಿಂದ ಲಕ್ಷಾಂತರ ರೂಪಾಯಿ ಸಂಸ್ಥೆಗೆ ನಷ್ಟ. ಸಂಸ್ಥೆಯ ಪುತ್ತೂರು ವಿಭಾಗದ ಭದ್ರತಾಧಿಕಾರಿಗಳಿಂದ ಬೃಹತ್ ಪ್ರಕರಣ ಪತ್ತೆ ಹಚ್ಚಿ ಕೇಸು ದಾಖಲು, ಪುತ್ತೂರು ಡಿಪೋ ಹೊಸ ಮ್ಯಾನೇಜರ್ ಹಾಗೂ ಭದ್ರತಾಧಿಕಾರಿಗಳಿಂದ ದಾಳಿ ಅಪಾರ ಪ್ರಮಾಣದ ಲಕ್ಷಾಂತರ ಮೌಲ್ಯದ ಬಸ್‌ನ ಸ್ಪೇರ್ ಪಾರ್ಟ್ ಪತ್ತೆ.

ಸಾರಿಗೆ ನೌಕರರ ಮುಷ್ಕರದಲ್ಲಿ ಸಾಯಿಬಾಬನ ಪವಾಡ ಎಂಬ ಶಿರೋನಾಮೆಗಳಲ್ಲಿ ಪುತ್ತೂರು ವಿಭಾಗ ಮತ್ತು ಘಟಕಕ್ಕೆ ಸಂಬಂಧಿಸಿದಂತೆ ನಿಂದನಾಕಾರಿ, ಮಾನಹಾನಿಕರ, ನಿಗಮದ ಗೌರವಕ್ಕೆ ಧಕ್ಕೆ ತರುವಂತಹ ಹಾಗೂ ಸಮಾಜದ ಸ್ವಾಸ್ತ್ಯ ಕೆಡಿಸುವ ಸಂದೇಶಗಳು ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಕುರಿತು ಎ.28ರಂದು ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಇದೊಂದು ಅಸಂಜ್ಞೇಯ ಪ್ರಕರಣವಾಗಿದ್ದರಿಂದ ನ್ಯಾಯಾಲಯದ ಅನುಮತಿ ಪಡೆಯುವಂತೆ ಹಿಂಬರಹ ನೀಡಿದ್ದರು.

ಇದೀಗ ಜೂ.7ರಂದು ನ್ಯಾಯಾಲಯದ ಮೂಲಕ ಖಾಸಗಿಯಾಗಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!