Wednesday, July 29, 2026
spot_imgspot_img
spot_imgspot_img

ಪ್ರೀತಿಸಿ ಮದುವೆಯಾದ 7 ದಿನಕ್ಕೆ ಪತಿರಾಯ ಪರಾರಿ: ಕಾರಣ ನಿಗೂಢ

- Advertisement -
- Advertisement -

ತುಮಕೂರು: ಪ್ರೀತಿಸಿ ಮದುವೆಯಾದ ಏಳೇ ದಿನಕ್ಕೆ ಗಂಡ ಎಸ್ಕೇಪ್‌ ಆಗಿರುವ ಘಟನೆ ಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ನಡೆದಿದೆ. ಮನೆಯವರ ವಿರೋಧದ ನಡುವೆ . ನಿಖಿಲ್ ಮತ್ತು ಚೈತ್ರಾ ಫೆಬ್ರವರಿ 7ರಂದು ಅಂತರ್ಜಾತಿ ವಿವಾಹ ಆಗಿ ಸಬ್​ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು. ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ಮನೆಮಾಡಿ ವಾಸವಾಗಿದ್ದರು.

ಚೈತ್ರಾ ಮೂಲತಃ ತಿಪಟೂರು ತಾಲೂಕಿನ ಅಟ್ನ ಗ್ರಾಮದವಳಾಗಿದ್ದು, ತುರುವೇಕೆರೆಯ ಮೊಬೈಲ್ ಶಾಪ್ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದಳು, ಅದೇ ಅಂಗಡಿಯಲ್ಲಿ,ಫೈನಾನ್ಸ್ ವಿಭಾಗದಲ್ಲಿ ನಿಖಿಲ್ ಕೆಲಸ ಮಾಡುತ್ತಿದ್ದ. ಇಬ್ಬರು ಪ್ರೀತಿಸಿ . ಫೆಬ್ರವರಿ 7ರಂದು ಸಬ್​ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿಯನ್ನು ಸಹ ಮಾಡಿಸಿದ್ದರು. ಫೆಬ್ರವರಿ 10ರಂದು ತಾಯಿ ನೋಡಬೇಕೆಂದು ನಿಖಿಲ್ ಹೋಗಿದ್ದನಂತೆ, ಬಳಿಕ ಆತನ ಮೊಬೈಲ್ ಸ್ವಿಚ್‌ ಆಫ್‌ ಆಗಿದೆ. ಗಂಡನನ್ನು ಹುಡುಕುತ್ತಾ ಆತನ ಮನೆಗೆ ಹೋದ ಚೈತ್ರಾಗೆ ನಿಖಿಲ್ ತಂದೆ ಬಸವರಾಜು ಅಕೆಯನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಪ್ರಕರಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!