Thursday, June 30, 2022
spot_imgspot_img
spot_imgspot_img

ಪ್ರೇಕ್ಷಕರ ಮನಗೆದ್ದ ಅಕ್ಷಯ್ ಕುಮಾರ್ ರೈ ದಂಬೆಕಾನ ನಿರ್ಮಾಣದ “ಕತ್ತರಿ” ಕಿರು ಚಿತ್ರ

- Advertisement -
- Advertisement -

ಮದ್ಯಪಾನ ಮತ್ತು ಮಾದಕ ಪದಾರ್ಥಗಳ ಸೇವನೆಯಿಂದ ವ್ಯಕ್ತಿ, ಸಮಾಜ ಮತ್ತು ಕುಟುಂಬದ ಆರೋಗ್ಯ ನಶಿಸಿ ಇಡೀ ದೇಶದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇತ್ತೀಚೆಗಂತೂ ಮಾದಕ ವಸ್ತುಗಳ ಬಳಕೆದಾರಲ್ಲಿ ಯುವಕ- ಯುವತಿಯರ ಸಂಖ್ಯೆಯೇ ಹೆಚ್ಚು. ಅದೆಷ್ಟೋ ಯುವಕ ಯುವತಿಯರು ಮಾದಕ ವಸ್ತುಗಳ ಬಳಕೆಯಿಂದ ತಮ್ಮ ಜೀವ- ಜೀವನವನ್ನು ಕಳೆದುಕೊಂಡ ಅದೆಷ್ಟೋ ನೈಜ್ಯ ಘಟನೆಗಳು, ಉದಾಹರಣೆಗಳನ್ನು ದಿನಪ್ರತೀ ನಾವು ನೋಡುತ್ತಾ ಬಂದಿದ್ದೇವೆ. ಪ್ರಧಾನಿ ಮೋದಿಯವರ ಸಂಕಲ್ಪದ0ತೆ “ನಶೆ ಮುಕ್ತ ಭಾರತ” ದ ಕನಸು ನನಸಾಗಬೇಕಾದರೆ ಎಲ್ಲಾ ಯುವಕ ಯುವತಿಯರು ಸೇರಿದಂತೆ ಪ್ರತಿಯೊಬ್ಬ ಭಾರತೀಯನು ದುಶ್ಚಟಗಳಿಂದ ದೂರವಿದ್ದು “ನಶೆ ಮುಕ್ತ ಭಾರತ”ವನ್ನಾಗಿಸಬೇಕು.

ಮಧ್ಯಪಾನ, ಡ್ರಗ್ಸ್, ದೂಮಪಾನ, ಸಿಗರೇಟ್ ಸೇವನೆ ಮುಂತಾದವುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ ಅದಲ್ಲದೆ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಕುಂಠಿತಗೊಳಿಸುತ್ತದೆ. ಜೊತೆಗೆ ಪರಿಸರದ ಮೇಲೂ ಈ ಮಾದಕ ವಸ್ತುಗಳು ಕೆಟ್ಟ ಪರಿಣಾಮ ಬೀಳುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಜೊತೆಗೆ ಸ್ವಸ್ಥ ಸಮಾಜ ಬೆಳವಣಿಗೆಯಾಗಬೇಕಾದರೆ ಅದು ಆರೋಗ್ಯಯುತ ಪರಿಸರದಿಂದ ಮಾತ್ರ ಸಾಧ್ಯ. ಪರಿಸರ ಶುದ್ಧವಾಗಿರಬೇಕೆಂದರೆಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿರಬೇಕು.. ಹೀಗೆ ಯುವಕ-ಯುವತಿಯರು ದುಶ್ಚಟಗಳಿಗೆ ಬಲಿಯಾದರೆ ಮುಂದೆ ತಮ್ಮ ಜೀವನದಲ್ಲಿ ಜೇಬಿಗೂ ಜೀವನಕ್ಕೂ ಯಾವ ರೀತಿಯ ಕೆಟ್ಟ ಪರಿಣಾಮ ಬೀಳುತ್ತದೆ ಎಂಬುವುದಾಗಿ ಅಕ್ಷಯ್ ರೈ ದಂಬೆಕಾನ ಇವರ ನಿರ್ಮಾಣ- ಪರಿಕಲ್ಪನೆಯಲ್ಲಿ ಮೂಡಿಬಂದ “ಕತ್ತರಿ” (ಜೇಬಿಗೂ.. ಜೀವನಕ್ಕೂ..) ಎಂಬ ಕಿರು ಸಿನಿಮಾ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಿರುಚಿತ್ರವಾಗಿ ಪ್ರೇಕ್ಷಕರ ಮನ ಗೆದ್ದಿದೆ.

ರತನ್ ಕುಮಾರ್ ಪೂಜಾರಿ ನಿರ್ದೇಶಿರುವ “ಕತ್ತರಿ” ಕಿರುಚಿತ್ರದಲ್ಲಿ ರಕ್ಷಿತ್ ರೈ, ರಾಕೇಶ್ ರೈ, ಶಮ್ಜೀತ್ ರೈ ಚಿಲುಮೆಕಾರು, ಅಭಿಜಿತ್ ರೈ ಚಿಲುಮೆಕಾರು, ರಘು ಶೆಟ್ಟಿ ನಟಿಸಿದ್ದಾರೆ. ಮುಳಿಯ ಜ್ಯುವೆಲರ್ಸ್ ಇವರ ಸಹಕಾರದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ವಿಶೇಷವಾಗಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಇಂದು ಕುಡಚಿಯಲ್ಲಿ ಜನಪ್ರಿಯ ಬಿಜೆಪಿ ಶಾಸಕರೆಂದೆ ಹೆಸರುವಾಸಿಯಾದ ಪಿ.ರಾಜೀವ್ ಅವರು ಯುವಕರು ಮಾದಕ ವ್ಯಸನಿಗಳಾದರೆ ತಮ್ಮ ಆರ್ಥಿಕ ಪರಿಸ್ಥಿತಿ, ಆರೋಗ್ಯ ಸೇರಿದಂತೆ ಇಡೀ ಜೀವನದ ಮೇಲೆ ಯಾವ ರೀತಿಯಾಗಿ ಕೆಟ್ಟ ಪರಿಣಾಮ ಬೀಳುತ್ತದೆ ಎಂಬುದಾಗಿ ಸ್ಟಷ್ಟತೆಯನ್ನು ನೀಡಿ, ಈ ಕಿರುಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

- Advertisement -

Related news

error: Content is protected !!