- Advertisement -
- Advertisement -
ಬಂಟ್ವಾಳ : ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ) ವಿದ್ಯಾನಗರ ಸಜೀಪಮುನ್ನೂರು ಈ ಸಂಸ್ಥೆಯು ಕಳೆದ ಮೂವತ್ತು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅರಳುವ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಆತ್ಮ ಸಂತೃಪ್ತಿಯ ಹಾದಿಯಲ್ಲಿ ಸಾಗುತ್ತಿದ್ದು ಇವರ ನಿಸ್ವಾರ್ಥ ಸೇವೆಗೆ 2022ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ.
ಎಲೆಮರೆ ಕಾಯಿಯಂತೆ ಇವರ ಈ ಸೇವೆಗೆ ಟೀಮ್ ಮಾಣಿಕ್ಯದಂಗಣದ ವತಿಯಿಂದ ಮಾಣಿಕ್ಯದ ಬೊಲ್ಪು ಬಿರುದನ್ನು ನೀಡಿ ಗೌರವಿಸಿರುತ್ತಾರೆ. ಈ ಸಮಯದಲ್ಲಿ ಮಾಣಿಕ್ಯದಂಗಣದ ಸಂಸ್ಥಾಪಕ ಚಂದ್ರಶೇಖರ್ ಪೂಜಾರಿ ಹಾಗೂ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು ಹಾಗೂ ಖ್ಯಾತ ಕಾರ್ಯಕ್ರಮ ನಿರೂಪಕದಿನೇಶ್ ಸುವರ್ಣ ರಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ)ವಿದ್ಯಾನಗರ ಸಜೀಪಮುನ್ನೂರು ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.
- Advertisement -